upahara

Upahara article consists the list of recipes that are usually prepared for breakfast. The list is given both in English and regional language to make people understand the recipe better. There are more than fifty such recipes included in this category. It has rice items, rotis, khichdi, upma, dosa, idli and many other. Varieties of flavors in rice, Dosa, Idli can be found. These articles help people who wants to taste the food prepared in other part of our country and people living away from home. The instructions are given thoroughly so that referring person is not put in to any confusion. Images of the step by step recipes are also shared to help them further.

HEEREKAI METHI KICHADI ಹೀರೇ ಕಾಯಿ ಮೇಥಿ ಕಿಚಡಿ

ಆರೋಗ್ಯಕ್ಕೆ ಹೀರೆಕಾಯಿ ಮತ್ತು ಮೆಂತ್ಯ ಸೊಪ್ಪು ಎರಡೂ ಬಹಳ ಒಳ್ಳೆಯದು! ಈ ಆರೋಗ್ಯಕರವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಹೀರೇಕಾಯಿ, 1 ಕಟ್ಟು ಮೆಂತ್ಯ ಸೊಪ್ಪು, 1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.    1 ಲೋಟ ಅಕ್ಕಿ/ಗೋಧಿ ನುಚ್ಚು, 1/2 ಲೋಟ ಹೆಸರು ಬೇಳೆ ಸ್ವಲ್ಪ ಹುರಿದು ತೊಳೆದಿಡಿ. ನಾನು ಹಾಕಿರುವುದು ಗೋಧಿ ನುಚ್ಚು ! ( Broken wheat ) ಕುಕ್ಕರಿನಲ್ಲಿ [...]

By | 2018-03-30T23:20:13+00:00 March 30th, 2018|Kannada, upahara|0 Comments

GOJJANNA ಗೊಜ್ಜನ್ನ

ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- ನಿಂಬೆ ಹಣ್ಣು ಗಾತ್ರದ ಹುಣಿಸೆ ರಸ ತೆಗೆದಿಡಿ. 4 ಚಮಚ ಕಾಯಿ ತುರಿದಿಡಿ.     ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ. 1 ಲೋಟ ಅಕ್ಕಿ ತೊಳೆದು ಹುಣಿಸೆ ರಸ, 2 ಚಮಚ ರಸಂ ಪುಡಿ ( ಸಾರಿನ ಪುಡಿ ), ಉಪ್ಪು, ಚಿಟಿಕೆ ಅರಿಷಿಣ, ಚೂರು ಬೆಲ್ಲ 2 ಲೋಟ ನೀರು [...]

By | 2018-03-20T23:39:54+00:00 March 20th, 2018|Kannada, Oota, upahara|0 Comments

MAVINA CHITRANNA ಮಾವಿನ ಚಿತ್ರಾನ್ನ

ನಮ್ಮ ಮನೆಯಲ್ಲಿ ಯುಗಾದಿ ಹಬ್ಬದ ದಿನ ತಪ್ಪದೆ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ತೋತಾಪುರಿ ಮಾವಿನ ಕಾಯಿ ತುರಿದಿಡಿ. 1/2 ಹೋಳು ತೆಂಗಿನ ಕಾಯಿ ತುರಿದಿಡಿ. 10 ರಿಂದ 12 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.    ಮೇಲೆ ಹೇಳಿರುವ ಮೂರನ್ನು ಸ್ವಲ್ಪ ಉಪ್ಪು ಹಾಕಿ, ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, [...]

By | 2018-03-17T17:57:46+00:00 March 17th, 2018|Kannada, Oota, upahara|0 Comments

HESARUBELE UPPITTU ಹೆಸರು ಬೇಳೆ ಉಪ್ಪಿಟ್ಟು

ಬೇಸಿಗೆಗೆ ಒಂದು ತಂಪಾದ ಉಪ್ಪಿಟ್ಟು! ಹೆಸರು ಬೇಳೆಯನ್ನು ಈ ಬೇಸಿಗೆಯಲ್ಲಿ ಎಷ್ಟು ತಿಂದರೂ ಒಳ್ಳೆಯದು! ಹೆಸರು ಬೇಳೆಯ ರುಚಿಯಾದ ಉಪ್ಪಿಟ್ಟು ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಹೆಸರು ಬೇಳೆ ತೊಳೆದು 1 ಗಂಟೆ ನೆನೆಸಿ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ.     ಇದಕ್ಕೆ 1/2 ಲೋಟ ಅಕ್ಕಿ ತರಿ ಹಾಕಿ ಚೆನ್ನಾಗಿ ಕಲೆಸಿ 1/2 ಗಂಟೆ ನೆನೆಸಿಡಿ. ಈ ಮಿಶ್ರಣವನ್ನು ಕುಕ್ಕರಿನಲ್ಲಿ ಇಡ್ಲಿಯ ಹಾಗೆ ಎಣ್ಣೆ ಸವರಿದ ಬಟ್ಟಲಿನಲ್ಲಿ [...]

By | 2018-03-15T21:00:29+00:00 March 14th, 2018|Kannada, upahara|0 Comments

VEGETABLES RAVE IDLI ವೆಜಿಟೇಬಲ್ಸ್ ರವಾ ಇಡ್ಲಿ

ರವಾ ಇಡ್ಲಿ ಎಲ್ಲರೂ ಇಷ್ಟಪಡುವ ತಿಂಡಿ! ರುಚಿಯಾದ ರವಾ ಇಡ್ಲಿಯನ್ನು ಮತ್ತಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ನಿಮಗೆ ಇಷ್ಟವಾದ ಯಾವುದಾದರೂ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಬೆಯಲ್ಲಿ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಬಟಾಣಿ ಈ ತರಹದ ತರಕಾರಿಗಳನ್ನು ಹಾಕಬಹುದು.     ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವು, 1 ಲೋಟ ಮೀಡಿಯಂ ರವೆ ( ಉಪ್ಪಿಟ್ಟು ರವೆ ) ಹಾಕಿ ಘಮ್ ಎಂದು ವಾಸನೆ [...]

By | 2018-03-05T22:13:15+00:00 March 5th, 2018|Kannada, upahara|0 Comments

ADAI ( BELEGALA DOSE ) ಅಡೈ ( ಬೇಳೆಗಳ ದೋಸೆ )

ತಮಿಳಿನಲ್ಲಿ ಅಡೈ ಅಂದರೆ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಬೇಳೆಗಳು ತಮ್ಮಲ್ಲಿ ಬೇಕಾದಷ್ಟು ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿವೆ! ಎಲ್ಲಾ ಬೇಳೆಗಳನ್ನು ಒಟ್ಟು ಗೂಡಿಸಿ ಮಾಡುವ ಆರೋಗ್ಯಕರವಾದ, ರುಚಿಕರವಾದ ರೆಸಿಪಿ ಇಲ್ಲಿದೆ! ಅಡೈ ಮಾಡುವ ವಿಧಾನ:- ದೋಸೆ ಅಕ್ಕಿ - 1 ಕಪ್ ತೊಗರಿ ಬೇಳೆ - 1/2 ಕಪ್ ಹೆಸರು ಬೇಳೆ - 1/2 ಕಪ್ ಉದ್ದಿನ ಬೇಳೆ - 1/2 ಕಪ್ ಕಡಲೇ ಬೇಳೆ - 1/2 ಕಪ್ ಗಟ್ಟಿ ಅವಲಕ್ಕಿ - 2 ಚಮಚ [...]

By | 2018-02-26T22:19:41+00:00 February 26th, 2018|Kannada, upahara|0 Comments

PINEAPPLE KESARI BATH ಪೈನಾಪಲ್ ಕೇಸರಿ ಬಾತ್

ಕೇಸರಿ ಬಾತ್ ಎಲ್ಲರ ಮೆಚ್ಚಿನ ಸಿಹಿ ತಿಂಡಿ! ಅದರಲ್ಲೂ ಪೈನಾಪಲ್ ಹಾಕಿ ಮಾಡಿದ ಕೇಸರಿ ಬಾತ್ ಮತ್ತಷ್ಟು ರುಚಿಕರ! ಮಾಡುವ ವಿಧಾನ :- 1 ಲೋಟ ಚಿರೋಟಿ ರವೆಯನ್ನು 2 ಚಮಚ ತುಪ್ಪ ಹಾಕಿ ಹುರಿದಿಡಿ. 1 ಚಿಕ್ಕ ಪೈನಾಪಲ್ ಸಣ್ಣಗೆ ಹೆಚ್ಚಿಡಿ ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ. 4 ಏಲಕ್ಕಿ ಪುಡಿ ಮಾಡಿಡಿ.    ಬಾಣಲೆಯಲ್ಲಿ 1/4 ಲೋಟ ತುಪ್ಪ ಹಾಕಿ. ಗೋಡಂಬಿ, ಬಾದಾಮಿ, ದ್ರಾಕ್ಷಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಹೆಚ್ಚಿದ ಪೈನಾಪಲ್ [...]

By | 2018-02-20T22:30:16+00:00 February 20th, 2018|Kannada, upahara|0 Comments

PALAK IDLI FRY ಪಾಲಾಕ್ ಇಡ್ಲಿ ಫ್ರೈ

ರುಚಿಯಾದ, ಸುಲಭವಾಗಿ ಮಾಡಬಹುದಾದ ಹೊಸ ರುಚಿಯ ಪಾಲಾಕ್ ಇಡ್ಲಿ ಫ್ರೈ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಬಟನ್ ಇಡ್ಲಿಯ ತಟ್ಟೆಯಲ್ಲಿ ಪುಟ್ಟ ಪುಟ್ಟ ಇಡ್ಲಿಗಳನ್ನು ಮಾಡಿಡಿ. ಬಟನ್ ಇಡ್ಲಿಯ ತಟ್ಟೆ ಇಲ್ಲದಿದ್ದರೆ ಸಾಧಾರಣವಾಗಿ ಮಾಡುವ ಇಡ್ಲಿಯನ್ನೇ ಮಾಡಿ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಮಾಡಬಹುದು.      2 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ ಹಿಟ್ಟು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಗಂಟಿಲ್ಲದ ಹಾಗೆ ಕಲೆಸಿ, ಬೆಂದ ಇಡ್ಲಿಗಳನ್ನು ಒಂದೊಂದಾಗಿ [...]

By | 2018-02-12T21:48:43+00:00 February 11th, 2018|Kannada, upahara|0 Comments

JOLADA DOSE ಜೋಳದ ದೋಸೆ

ಎಲ್ಲರಿಗೂ ಗೊತ್ತಿರುವ ಹಾಗೆ ಜೋಳ ಆರೋಗ್ಯಕ್ಕೆ ಒಳ್ಳೆಯದು! ಜೋಳದ ಹಿಟ್ಟಿನ ರುಚಿಯಾದ ದೋಸೆ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಅಳತೆ ಜೋಳದ ಹಿಟ್ಟು, 1/2 ಅಳತೆ ಚಿರೋಟಿ ರವೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, 1 ಚಮಚ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ, ಉಪ್ಪು, ಸಣ್ಣಗೆ ಹೆಚ್ಚಿದ 1 ಈರುಳ್ಳಿ ( Optional ) ಹಾಕಿ ಸುಮಾರು 3 3/4 ರಿಂದ 4 ಅಳತೆ ನೀರು ಹಾಕಿ [...]

By | 2018-02-06T22:04:04+00:00 February 6th, 2018|Kannada, upahara|0 Comments

MAVINA KAYI GOJJU ಮಾವಿನ ಕಾಯಿ ಗೊಜ್ಜು

ಬೇಸಿಗೆ ಬಂತೆಂದರೆ ಎಲ್ಲಾ ಕಡೆ ಮಾವಿನ ಕಾಯಿ, ಹಣ್ಣಿನ ಸುವಾಸನೆ ತುಂಬಿ ಹೋಗುತ್ತದೆ! ಮಾವಿನ ಕಾಯಿಯಿಂದ ಮಾಡುವ ಸುಲಭವಾದ, ರುಚಿಯಾದ, ತಿಂಗಳಾದರೂ ಕೆಡದ ಗೊಜ್ಜಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಗಟ್ಟಿಯಾದ ತೋತಾಪುರಿ ಮಾವಿನ ಕಾಯಿ ಆಯ್ಕೆ ಮಾಡಿ ಕೊಳ್ಳಿ. ಗುಂಡು ಮಾವಿನಲ್ಲೂ ಮಾಡಬಹುದು. ಸ್ವಲ್ಪ ಹುಳಿ ಹೆಚ್ಚು ಇರುತ್ತದೆ! ತೋತಾಪುರಿ ಮಾವು ಹುಳಿ ಕಡಿಮೆ! 2 ಮಾವಿನ ಕಾಯಿ ತೊಳೆದು, ಒರೆಸಿ ತುರಿದಿಡಿ. ನೀರಿನಂಶ ಸ್ವಲ್ಪವೂ ಇರಬಾರದು ಈ ಗೊಜ್ಜು ಮಾಡುವಾಗ!    1 ಟೀ [...]

By | 2018-02-05T22:34:14+00:00 February 5th, 2018|Kannada, Oota, upahara|0 Comments