Indian Food Recipe

Indian food recipes are one of the recipes that are in demand worldwide. It is the specialty of the foods that are cooked in India. The foods that everyone wants to taste all over again, foods that are easily prepared at home are the ones that are included in the website. People across our country can easily access the information as the information are being shared on the platform in as many languages as possible. This is one of the fact that people look for in a website publishing recipes. There is also provision for sharing your thoughts and asking for a specific food recipe.

BEETROOT POORI ಬೀಟ್ ರೂಟ್ ಪೂರಿ

ಬೀಟ್ ರೂಟ್ ಒಂದು ಆರೋಗ್ಯಕರ ತರಕಾರಿ, ಅದರಲ್ಲಿ fibre, iron, manganese, potassium ಬೇಕಾದಷ್ಟು ತುಂಬಿದೆ, ಅಲ್ಲದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಈ ಬೀಟ್ ರೂಟಿಗಿದೆ, ಆದರೆ ನಮ್ಮ ಮುದ್ದು ಮಕ್ಕಳು ಇದನ್ನು ತಿನ್ನುವುದಿಲ್ಲ, ಮಕ್ಕಳೇ ಏನು ದೊಡ್ಡವರೇ ತಿನ್ನುವುದಿಲ್ಲ, ಹಾಗಾದರೆ ಅಂಥವರಿಗಾಗಿ ಬೀಟ್ ರೂಟಿನ ಪೂರಿ ಮಾಡಿ ಕೊಡಿ, ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಬೀಟ್ ರೂಟ್ ಪೂರಿ ಮಾಡುವ ವಿಧಾನ:-  ಸಿಪ್ಪೆ ತೆಗೆದು ಬೀಟ್ ರೂಟನ್ನು ತುರಿದು ರುಬ್ಬಿ ಕೊಳ್ಳಿ, 1 ಬಟ್ಟಲು ಗೋಧಿ …

BEETROOT POORI ಬೀಟ್ ರೂಟ್ ಪೂರಿ Read More »

MASALA VADE ಮಸಾಲೆ ವಡೆ

ಆಹಾ ಹೆಸರು ಕೇಳಿದೊಡನೆ ಕೆಲವರ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ನಮ್ಮ ವಡೆಯದು!ನಮಗೆ ಗೊತ್ತು ಈ ರೆಸಿಪಿ ಅಂದಿರಾ!? ಸರಿ ಬಿಡಿ ಹೊಸದಾಗಿ ಅಡುಗೆ ಕಲಿಯುವವರಿಗೆ ಸಹಾಯ ಆಗುತ್ತದೆ! ಅವರು ನೋಡಿ ಮಾಡಿ ಕೊಡುತ್ತಾರೆ ! ನಾವೆಲ್ಲ ತಿನ್ನೋಣ! ಮಾಡುವ ವಿಧಾನ:- 1 ಪಾವು ಕಡಲೇ ಬೇಳೆ ತೊಳೆದು 2 ಗಂಟೆ ಕಾಲ ನೆನೆಸಿಡಿ. 1 ಪಾವು ಅಂದರೆ 1/4 kg ಗಿಂತ ಚೂರು ಕಡಿಮೆ ಅಷ್ಟೇ! 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಇಂಚು …

MASALA VADE ಮಸಾಲೆ ವಡೆ Read More »

GODHI ROTTI ಗೋಧಿ ರೊಟ್ಟಿ

ಚಪಾತಿ ತಿನ್ನಲು ಬೇಸರವಾದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ ನಿಮಗೆ ಬೇಕಾಗುವಷ್ಟು ಸೊಪ್ಪು ಹೆಚ್ಚಿಡಿ. ನಾನು ಸಬ್ಬಾಕ್ಷಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿದ್ದೇನೆ. 2 ಚಮಚ ಕಾಯಿ ತುರಿದಿಡಿ. ಅವರೆ ಕಾಳು ಹಾಕುವುದಾದರೆ ಕುಕ್ಕರಿನಲ್ಲಿ ಬೇಯಿಸಿಡಿ. ಬಾಣಲೆಯಲ್ಲಿ 1 1/2 ಲೋಟದಷ್ಟು ನೀರು ಹಾಕಿ ಬಿಸಿಯಾಗಲು ಇಡಿ. ನೀರು ಬಿಸಿಯಾದಾಗ 1 ಲೋಟ ಗೋಧಿ ಹಿಟ್ಟು, ಈರುಳ್ಳಿ, ಸೊಪ್ಪು, ಕಾಯಿ ತುರಿ, ಉಪ್ಪು, 1/2 ಚಮಚ ಜೀರಿಗೆ ಹಾಕಿ ಚೆನ್ನಾಗಿ …

GODHI ROTTI ಗೋಧಿ ರೊಟ್ಟಿ Read More »

DAL KICHADI ದಾಲ್ ಕಿಚಡಿ

ಉತ್ತರ ಭಾರತದ ಪೊಂಗಲ್ ಎಂದೇ ಹೇಳಬಹುದು! ಮಾಡುವುದು ಸುಲಭ! ಆದರೆ ರುಚಿಕರ! ಆರೋಗ್ಯಕರ! ಮಾಡುವ ವಿಧಾನ:- 1 ಈರುಳ್ಳಿ, 2 ಟೋಮೋಟೋ ಸಣ್ಣಗೆ, 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿಡಿ. ಕುಕ್ಕರಿನಲ್ಲಿ 4 ಚಮಚ ತುಪ್ಪ / ಎಣ್ಣೆ ಹಾಕಿ 1/2 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ, ಟೋಮೇಟೋ,1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ, 1/2 ಚಮಚ ಗರಂ ಮಸಾಲ ಪುಡಿ, 1/2 ಚಮಚ ಖಾರಾದ ಪುಡಿ( ಖಾರಾ …

DAL KICHADI ದಾಲ್ ಕಿಚಡಿ Read More »

CHOCOLATE IDLI & VEGETABLES IDLI ಚಾಕೊಲೇಟ್ ಇಡ್ಲಿ & ವೆಜಿಟೇಬಲ್ ಇಡ್ಲಿ

ನಾಳೆ ನವೆಂಬರ್ 14 ! ಮಕ್ಕಳ ದಿನಾಚರಣೆ! ಅರೆ ಹೌದಲ್ಲವಾ! ಮರೆತಿದ್ದೆ ಅಂತ ತಲೆ ಮೇಲೆ ಕೈಯಾಕೆ ಇಟ್ಟುಕೊಳ್ತೀರಾ!? ನಾನಿದ್ದೀನಲ್ಲಾ ನಿಮಗೆ ಙಾಪಕ ಮಾಡೋದಕ್ಕೆ! ಸರಿ ನಾಳೆ ಮಕ್ಕಳಿಗೆ ಇಷ್ಟವಾಗುವ ಒಂದು ರೆಸಿಪಿ ಹೇಳ್ತೀನಿ ಕೇಳಿ! ಚಾಕೊಲೇಟ್ ಇಡ್ಲಿ! ಮಕ್ಕಳಿಗೆ ತುಂಬಾ ಇಷ್ಟವಾಗುವುದು ಚಾಕೊಲೇಟ್! ಅದನ್ನೇ ಹಾಕಿ ಇಡ್ಲಿ ಮಾಡಿಕೊಡಿ. ಖುಷಿಯಾಗಿ ತಿನ್ನುತ್ತಾರೆ! ಏನಂದಿರಿ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದಲ್ಲ! ಹಲ್ಲು ಹುಳುಕಾಗುತ್ತೆ ಅಂದಿರಾ!? ಪಾಪ ಮಕ್ಕಳು ! ನಾಳೆ ಅವರ ದಿನಾಚರಣೆ! ಮಾಡಿಕೊಡಿ ! ತುಂಬಾ ಸುಲಭ ಮಾಡುವುದು! …

CHOCOLATE IDLI & VEGETABLES IDLI ಚಾಕೊಲೇಟ್ ಇಡ್ಲಿ & ವೆಜಿಟೇಬಲ್ ಇಡ್ಲಿ Read More »

KOTTHAMBARI CHITRANNA ಕೊತ್ತಂಬರಿ ಚಿತ್ರಾನ್ನ

ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು! ಕಬ್ಬಿಣದ ಅಂಶ ಹೇರಳವಾಗಿದೆ! ಆದರೆ ನಮ್ಮ ಮಕ್ಕಳು ಊಟ ಮಾಡುವಾಗ ಕೊತ್ತಂಬರಿ ಸೊಪ್ಪು ಸಿಕ್ಕರೆ ತೆಗೆದು ಪಕ್ಕಕ್ಕಿಡುತ್ತಾರೆ! ಅವರು ಹಾಗೆ ಮಾಡಬಾರದು ಅಂದರೆ ಹೀಗೆ ಮಾಡಿ! 😉😉😉 ಈಗ ಬೆಂಗಳೂರಲ್ಲಿ 1 ಕಟ್ಟು ನಾಟಿ ಕೊತ್ತಂಬರಿ ಸೊಪ್ಪು 10 ರೂಪಾಯಿ. ಹಾಗಾದರೆ ಈ ದಿನವೇ ಮಾಡಿ! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು ಅನ್ನ ಮಾಡಿಡಿ. 1 ಕಂತೆ ಕೊತ್ತಂಬರಿ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದಿಡಿ. ನಾಟಿ ಕೊತ್ತಂಬರಿ ಸೊಪ್ಪು ಆದರೆ …

KOTTHAMBARI CHITRANNA ಕೊತ್ತಂಬರಿ ಚಿತ್ರಾನ್ನ Read More »

MANOHARA UNDE ಮನೋಹರ ಉಂಡೆ( ಮನವಾರು ಉಂಡೆ)

ತಮಿಳುನಾಡಿನ ಸಾಂಪ್ರಾದಾಯಕ ಸಿಹಿ ತಿಂಡಿ! ಅಯ್ಯಂಗಾರ್ ಸಂಪ್ರದಾಯದಲ್ಲಿ ಮದುವೆ ಮನೆಗಳಲ್ಲಿ, ಮುಂಜಿಗಳಲ್ಲಿ ತಪ್ಪದೆ ಮಾಡುವ ಸಿಹಿ ಇದು! ಮಾಡುವ ವಿಧಾನ:- 1 ಲೋಟ ಉದ್ದಿನ ಬೇಳೆ ತೊಳೆದು 2 ರಿಂದ 3 ಗಂಟೆ ನೆನೆಸಿಡಿ. ನಂತರ ನೀರು ಬಗ್ಗಿಸಿ ಉದ್ದಿನ ಬೇಳೆಯನ್ನು ಆದಷ್ಟೂ ನುಣ್ಣಗೆ ರುಬ್ಬಿ. ಹೆಚ್ಚು ನೀರು ಹಾಕಬೇಡಿ. ನೆಂದ ಉದ್ದಿನ ಬೇಳೆಯಲ್ಲಿರುವ ನೀರಿನಂಶವೇ ಸಾಕು! ತೀರ ಬೇಕೆನಿಸಿದರೆ ಒಂದೆರಡು ಚಮಚ ನೀರು ಹಾಕಿ.      ರುಬ್ಬಿದ ಮಿಶ್ರಣಕ್ಕೆ ಚಿಟಿಕೆ ಉಪ್ಪು, ಸ್ವಲ್ಪ ಅಕ್ಕಿ …

MANOHARA UNDE ಮನೋಹರ ಉಂಡೆ( ಮನವಾರು ಉಂಡೆ) Read More »

GHEE RICE & VEGETABLE KURMA ಘೀ ರೈಸ್ ಮತ್ತು ವೆಜಿಟೇಬಲ್ ಕುರ್ಮಾ

“Made for eact other” ಅಂತಾರಲ್ಲಾ ಹಾಗೇ ಒಂದಕ್ಕೊಂದು ಹೇಳಿ ಮಾಡಿಸಿದ ಆಹಾರ ಇದು! ಮದುವೆ ಮನೆಗಳಲ್ಲಿ, ಹೋಟೆಲ್ ಗಳಲ್ಲಿ ಎಲ್ಲರಿಗೂ ಇಷ್ಟವಾಗುವ ಆಹಾರ! ಮಾಡುವ ವಿಧಾನ:- ಘೀ ರೈಸ್ 1 ಪಾವು ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 1 ಪಾವು ಕಾಯಿ ಹಾಲು ತೆಗೆದಿಡಿ. ಅಥವಾ ಹಸುವಿನ ಹಾಲಾದರೂ ಪರವಾಗಿಲ್ಲ. ನಾನು ಹಸುವಿನ ಹಾಲು ಹಾಕಿರುವುದು. ಸೂಪರ್ ಆಗಿರುತ್ತದೆ ರುಚಿ! ಹೆಸರೇ ಹೇಳುವಂತೆ ಈ ರೆಸಿಪಿಯಲ್ಲಿ …

GHEE RICE & VEGETABLE KURMA ಘೀ ರೈಸ್ ಮತ್ತು ವೆಜಿಟೇಬಲ್ ಕುರ್ಮಾ Read More »

DIDHEER TOMATO SAARU ದಿಢೀರ್ ಟೊಮೇಟೋ ಸಾರು

ದಿಢೀರ್ ಟೊಮೇಟೋ ಸಾರು ಮಾಡುವ ವಿಧಾನ:- 4 ಟೊಮೇಟೋ ತೊಳೆದು ಕತ್ತರಿಸಿ, 1 ಚಮಚ ಕರಿ ಮೆಣಸು, 1 ಚಮಚ ಜೀರಿಗೆ, 1 ಗೆಡ್ಡೆ ಬೆಳ್ಳುಳ್ಳಿ, 2 ಹಸಿ ಮೆಣಸಿನ ಕಾಯಿ ಹಾಕಿ ನೀರು ಸೇರಿಸದೆ ರುಬ್ಬಿ ಕೊಳ್ಳಿ (ಹುರಿಯುವ ಅಗತ್ಯವಿಲ್ಲ, ಮೆಾದಲು ಮೆಣಸು, ಜೀರಿಗೆ, ಬೆಳ್ಳುಳ್ಳಿ ಸ್ವಲ್ಪ ಪುಡಿ ಮಾಡಿ, ನಂತರ ಟೊಮೇಟೋ ಹಾಕಿ ರುಬ್ಬಿ) ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಚಿಟಿಕೆ ಅರಿಶಿಣ ಹಾಕಿ, ರುಬ್ಬಿದ ಮಿಶ್ರಣ ಹಾಕಿ ಹಸಿ …

DIDHEER TOMATO SAARU ದಿಢೀರ್ ಟೊಮೇಟೋ ಸಾರು Read More »

BHOJANA ಭೋಜನ

ಈ ದಿನದ ವಿಶೇಷ ಭೋಜನದ ರೆಸಿಪಿಯ ವಿವರ ಇಲ್ಲಿದೆ! ಆಲೂ ಪಾಲಾಕ್ ಪರೋಟ ಸೀಮೆ ಬದನೆ ಕಾಯಿ ಪಲ್ಯ ಮೊಳಕೆ ಹೆಸರು ಕಾಳಿನ ಉಸಲಿ ಪುಳಿಯೋಗರೆ ಅನ್ನ ಮೂಲಂಗಿ ಸಾಂಬಾರ್ ಹಿದುಕಿದ ಬೇಳೆ ಸಾಂಬಾರ್ ದಿಢೀರ್ ಸಾರು ಹಪ್ಪಳ ಬೆಟ್ಟದ ನೆಲ್ಲಿ ಕಾಯಿ ಉಪ್ಪಿನ ಕಾಯಿ ಸಾಂಬಾರ್, ಉಸಲಿ, ಪಲ್ಯ, ಪುಳಿಯೋಗರೆ, ಹಪ್ಪಳದ ರೆಸಿಪಿ ನಾನು ಹಾಕಿಲ್ಲ. ಆಲೂ ಪಾಲಾಕ್ ಪರೋಟ ಮಾಡುವ ವಿಧಾನ:- 2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. 1 …

BHOJANA ಭೋಜನ Read More »