karunakarananda

Home/Swami Karunakarananda

About Swami Karunakarananda

This author has not yet filled in any details.
So far Swami Karunakarananda has created 12 blog entries.

ಸರಳತೆ

ಬಂಗಾಳದ ಪ್ರಸಿದ್ಧ ಸಂತರೂ, ಭಕ್ತಿಪಥದ ಪ್ರಚಾರಕರೂ ಆದ ಶ್ರೀಚೈತನ್ಯ ಮಹಾಪ್ರಭುಗಳು ಒಮ್ಮೆ ದಕ್ಷಿಣ ಭಾರತದ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾಗ ಶ್ರೀರಂಗಂಗೆ ಬಂದಿದ್ದರು. ಅವರು ಶ್ರೀಕ್ಷೇತ್ರದ ದೇವಾಲಯದ ಪ್ರದಕ್ಷಿಣೆ ಮಾಡುತ್ತಿದ್ದಾಗ ಅಲ್ಲಿ ಮೂಲೆಯಲ್ಲಿ ಕುಳಿತುಕೊಂಡು ಗೀತೆಯನ್ನು ಓದುತ್ತಿದ್ದ ವ್ಯಕ್ತಿ ಅವರ ಕಣ ್ಣಗೆ ಬಿದ್ದ. ಆತ ತಪ್ಪು ತಪ್ಪಾಗಿ ಉಚ್ಚರಿಸುತ್ತಿದ್ದುದನ್ನು ಕಂಡು ಸುತ್ತಲಿದ್ದ ಜನರು ಅಪಹಾಸ್ಯ ಮಾಡಿ ನಗುತ್ತಿದ್ದರು. ಆದರೂ ಆ ವ್ಯಕ್ತಿ ಬಿಡದೆ ತನ್ನ ಪಠನವನ್ನು ಮುಂದುವರೆಸುತ್ತಿದ್ದ. ಚೈತನ್ಯರು ಅವನ ಹತ್ತಿರ ಹೋದರು. ಆ ವ್ಯಕ್ತಿ ಓದುತ್ತ ಓದುತ್ತ [...]

By |2017-05-15T00:07:18+05:30May 15th, 2017|Kannada Articles|0 Comments

ಸಹಕಾರ

ಒಮ್ಮೆ ದೇಹದ ಅಂಗಾಂಗಗಳು ತಮ್ಮಲ್ಲೇ ಜಗಳವಾಡಿಕೊಂಡವು. ಎಲ್ಲವೂ ಸೇರಿ ಹೊಟ್ಟೆಯನ್ನು ದೂಷಿಸಲಾರಂಭಿಸಿದವು. "ನಾವೆಲ್ಲ ಬಹಳ ಕಷ್ಟ ಪಟ್ಟು ಆಹಾರವನ್ನು ಸಂಪಾದಿಸಿ ಈ ಹೊಟ್ಟೆಗೆ ಹಾಕುತ್ತೇವೆ. ಆದರೆ, ಇದು ಏನನ್ನೂ ಮಾಡದೆ ಸಮ್ಮನೆ ನಮ್ಮ ಶ್ರಮದ ಫಲವನ್ನು ತಿನ್ನುತ್ತದೆ," ಹೀಗೆಂದು ಆಲೋಚಿಸಿ ಇನ್ನು ಮುಂದೆ ತಾವು ಹೊಟ್ಟೆಗಾಗಿ ಯಾವ ಆಹಾರವನ್ನೂ ತಂದು ಹಾಕುವುದಿಲ್ಲ ಎಂದು ಶಪಥ ಮಾಡಿದವು. ಕೈಗಳು ದುಡಿಯುವುದಿಲ್ಲವೆಂದವು. ಹಲ್ಲುಗಳು ಅಗಿಯುವುದಿಲ್ಲವೆಂದವು. ಗಂಟಲು ನುಂಗುವುದಿಲ್ಲವೆಂದಿತು. ನಿಜವಾಗಿಯೂ ಅವುಗಳÀ ಅಸಹಕಾರ ಚಳುವಳಿ ಸಫಲವಾಯಿತು. ಕೊನೆಗೂ ತಾವೆಲ್ಲ ಸೇರಿ ಹೊಟ್ಟೆ [...]

By |2017-05-15T00:06:01+05:30May 15th, 2017|Kannada Articles|0 Comments

ಸಾವಿಗಾಗಿ ಸಿದ್ಧತೆ

ಈ ಎರಡಕ್ಷರದ ಪದ ಯಾರನ್ನು ತಾನೆ ಬೆಚ್ಚಿ ಬೀಳಿಸದು? ಆದರೂ ಯಾರಿಗಾದರೂ ಇದರಿಂದ ತಪ್ಪಿಸಿಕೊಳ್ಳಲಾಗಿದೆಯೆ? ಈ ಸಾವಿಗೆ ರಜೆ ಇರುವ ದಿನವೇ ಇಲ್ಲವೇನೊ? ದಿನನಿತ್ಯವೂ ನಮ್ಮ ಸುತ್ತ ಮುತ್ತ ನಮ್ಮ ಸಹಮಾನವರು ಒಬ್ಬೊಬ್ಬರಾಗಿ ಸಾವಿನ ಕರೆಗೆ ಓಗೊಡುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆಗ ಮನಸ್ಸಿಗೆ ದುಃಖವಾಗುತ್ತದೆ. ಒಂದು ದಿನ ನಮ್ಮ ಸರತಿಯೆಂಬ ಕಟು ಸತ್ಯ ಕಣ್ಣ ಮುಂದೆ ಕುಣ ದು ಅಣಕಿಸಿ ಓಡಿ ಹೋಗುತ್ತದೆ. ಆ ಕ್ಷಣ ನಮ್ಮಲ್ಲಿ ಜಗತ್ತಿನ ಬಗ್ಗೆ ತಾತ್ಕಾಲಿಕ ವೈರಾಗ್ಯ ಉದಿಸುತ್ತದೆ. ಕೆಲವು [...]

By |2017-05-15T00:04:12+05:30May 15th, 2017|Kannada Articles|0 Comments

ನಿಜವಾದ ಸುಹೃತ್

ಭಗವದ್ಗೀತೆಯಲ್ಲಿ (9.18) ಭಗವಂತ ತಾನು ಈ ಲೋಕದ ಸುಹೃತ್ ಎಂದು ಹೇಳಿಕೊಳ್ಳುತ್ತಾನೆ. ಸುಹೃತ್ ಎಂದರೆ ಮಿತ್ರ ಅಥವಾ ಹಿತೈಷಿ. ಶಂಕರರು ಈ ಶಬ್ದಕ್ಕೆ 'ಯಾವುದೇ ಪ್ರತ್ಯುಪಕಾರವನ್ನು ಬಯಸದೆ ಉಪಕಾರವನ್ನು ಮಾಡುವವನು' ಎಂದು ಅರ್ಥೈಸಿದ್ದಾರೆ. ಒಮ್ಮೆ ಒಬ್ಬನಿಗೆ ಒಂದು ಕನಸು ಬಿತ್ತು. ಅದರಲ್ಲಿ ಆತ ಕಡಲ ತೀರದ ಮರಳಿನ ಮೇಲೆ ಎರಡು ಜೊತೆ ಹೆಜ್ಜೆ ಗುರುತುಗಳನ್ನು ಕಂಡ. ಒಂದು ತನ್ನದು, ಇನ್ನೊಂದು ಯಾರದ್ದೆಂದು ಯೋಚಿಸುತ್ತಿರುವಾಗ ಎಲ್ಲಿಂದಲೋ ಭಗವಂತನದ್ದು ಎಂಬ ಉತ್ತರ ಸಿಕ್ಕಿತು. ಆ ಹೆಜ್ಜೆ ಗುರುತುಗಳು ಹೀಗೆ ಮುಂದೆ [...]

By |2017-05-15T00:02:24+05:30May 15th, 2017|Kannada Articles|0 Comments

ನಿಜವಾದ ಶಾಂತಿ

ಒಂದೂರಿನ ಒಬ್ಬ ರಾಜ ಒಮ್ಮೆ ‘ಶಾಂತಿ’ ಎಂಬ ತತ್ವದ ಮೇಲೆ ಯಾರು ಅತ್ಯುತ್ತಮವಾದ ಚಿತ್ರವನ್ನು ರಚಿಸುವರೊ ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಡಂಗುರ ಹೊಡೆಸಿದ. ಹಲವು ಕಲಾವಿದರು ಪ್ರಯತ್ನಿಸಿದರು. ರಾಜ ಪ್ರತಿಯೊಂದು ಚಿತ್ರವನ್ನೂ ನೋಡಿ ಕೊನೆಗೆ ಎರಡು ಚಿತ್ರಗಳು ಅವನ ಗಮನವನ್ನು ಸೆರೆ ಹಿಡಿದಿದ್ದರಿಂದ, ಅವುಗಳ ಮಧ್ಯೆ ಅತ್ಯುತ್ತಮವಾದುದನ್ನು ಆರಿಸಲು ನಿರ್ಧರಿಸಿದ. ಒಂದನೆ ಚಿತ್ರದಲ್ಲಿ ಸುತ್ತಲೂ ಶಾಂತಿಯನ್ನು ಬಿಂಬಿಸುವ ಎತ್ತರದ ಪರ್ವತಗಳನ್ನು, ಮೇಲೆ ಬಿಳಿಯ ಮೋಡಗಳನ್ನು ಹೊಂದಿರುವ ಶಾಂತವಾದ ಸರೋವರವಿತ್ತು. ನೋಡಿದವರು ಇದನ್ನು ಶಾಂತಿಯ ಅತ್ಯುತ್ತಮ ಸಂಕೇತವೆಂದು [...]

By |2017-05-14T23:57:19+05:30May 14th, 2017|Kannada Articles|0 Comments

ಏಕಾಗ್ರತೆ ಎಲ್ಲಿ?

ಒಬ್ಬ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ನಗರದ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಅದು ಮಾರುಕಟ್ಟೆ ಪ್ರದೇಶವಾದ್ದರಿಂದ ಅನೇಕ ವಾಹನಗಳಿಂದ, ಜನಜಂಗುಳಿಯಿಂದÀ ಕೂಡಿತ್ತು. ಎಲ್ಲೆಲ್ಲೂ ಶಬ್ದದಿಂದಲೇ ತುಂಬಿಹೋಗಿತ್ತು. ಹೀಗೆ ಹೋಗುತ್ತಿದ್ದಾಗ ಈ ವ್ಯಕ್ತಿ ತನ್ನ ಸ್ನೇಹಿತನಿಗೆ ಹೇಳಿದ, “ನನಗೆ ಮಿಡತೆಯ ರೆಕ್ಕೆಬಡಿತದ ಶಬ್ದ ಕೇಳಿ ಬರುತ್ತಿದೆ”, ಎಂದು. “ಏನು? ನಿನಗೇನಾದರೂ ಹುಚ್ಚು ಹಿಡಿದಿದೆಯೆ? ಇಂತಹ ಶಬ್ದದ ಮಧ್ಯೆ ಮಿಡತೆಯ ರೆಕ್ಕೆಯ ಸದ್ದು ಕೇಳಿಸುವುದೆಂದರೇನು?” “ಇಲ್ಲ, ನಾನು ನಿಜವಾಗಿ ಕೇಳಿಸಿಕೊಂಡೆ” ಹೇಳಿದ ಇವನು. “ಸಾಧ್ಯವೇ ಇಲ್ಲ”, ಪಟ್ಟು ಬಿಡದೆ ನುಡಿದ ಸ್ನೇಹಿತ. [...]

By |2017-05-14T23:55:07+05:30May 14th, 2017|Kannada Articles|0 Comments

ದಕ್ಷತೆ

ಒಮ್ಮೆ ಒಬ್ಬ ಮರ ಕಡಿಯುವವನಿಗೆ ಒಂದು ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಮಾಲೀಕ ಆತನ ಯೋಗ್ಯತೆಯೇನೆಂದು ಕೇಳಿದಾಗ ತಾನು ದಿನದಲ್ಲಿ 20 ಮರಗಳನ್ನು ಕಡಿದು ತರುವುದಾಗಿ ಹೇಳಿದ. ಮಾಲೀಕ ಸಂತೋಷಗೊಂಡು ಅವನಿಗೆ ಮರಕ್ಕೆ ನೂರು ರೂಪಾಯಿಗಳನ್ನು ಕೊಡುವುದಾಗಿ ಹೇಳಿದ. ಈತ ಅತ್ಯಂತ ಉತ್ಸಾಹದಿಂದ ಹೊತ್ತಾರೆ ಎದ್ದು ಕಾಡಿಗೆ ಹೋಗಿ ಮರಗಳನ್ನು ಕಡಿದು ಹಣ ಸಂಪಾದಿಸಲು ತೊಡಗಿದ. ಆದರೆ, ದಿನೇ ದಿನೇ ಇವನ ಸಾಮಥ್ರ್ಯ ಕುಗ್ಗುತ್ತಿರುವಂತೆ ಇವನಿಗೆ ಭಾಸವಾಯಿತು. ಹಿಂದೆ ದಿನಕ್ಕೆ ಇಪ್ಪತ್ತು ಮರಗಳನ್ನು ಕುಯ್ಯುತ್ತಿದ್ದು, ಬರ ಬರುತ್ತ ಹತ್ತಕ್ಕೆ [...]

By |2017-05-14T23:49:46+05:30May 14th, 2017|Kannada Articles|0 Comments

ಆಲೋಚನೆಯ ಆಯಾಮ ಬದಲಾದಾಗ

ಒಬ್ಬಳು ಮುದುಕಿ ದೇವಸ್ಥಾನದ ಮುಂದೆ ಕುಳಿತು ಹೂವು ಮಾರುತ್ತಿದ್ದಳು. ಎಂದೂ ಅವಳ ಮುಖ ನಗುವನ್ನು ಕಂಡಿರಲಿಲ್ಲ. ಮಳೆಗಾಲದಲ್ಲಿಯೂ, ಬೇಸಿಗೆಯಲ್ಲೂ ಏಕಪ್ರಕಾರವಾಗಿ ಅಳುವುದೆ ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಒಮ್ಮೆ ಆ ದೇವಸ್ಥಾನದ ಮುಂದೆ ಹಾದು ಹೋಗುತ್ತಿದ್ದ ಯುವಕನೊಬ್ಬ ಆಕೆ ಅಳುತ್ತಿದ್ದುದನ್ನು ಕಂಡು ಅನುಕಂಪೆಯಿಂದ ಅವಳ ಅಳುವಿಗೆ ಕಾರಣವನ್ನು ಕೇಳಿದ. ಅವಳು ತನ್ನ ಗೋಳನ್ನು ಹೇಳಿಕೊಂಡಳು. ಮುದುಕಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳನ್ನು ಶೂ ವ್ಯಾಪಾರಿಗೆ ಕೊಟ್ಟು ಮದುವೆ ಮಾಡಿದ್ದಳು. ಇನ್ನೊಬ್ಬಳನ್ನು ಕೊಡೆ ವ್ಯಾಪಾರಿಗೆ ಕೊಟ್ಟಿದ್ದಳು. ಮಳೆಗಾಲದಲ್ಲಿ ಯಾರೂ ಶೂ [...]

By |2017-05-14T23:44:48+05:30May 14th, 2017|Kannada Articles|0 Comments

ಎಲ್ಲರನ್ನೂ ಸಮಾನರಾಗಿ ಪ್ರೀತಿಸುವ ಕಲೆ

ಬಾಳಿನಲ್ಲಿ ಪ್ರೀತಿ ಎಲ್ಲರಿಗೂ ಬೇಕಾದದ್ದೆ. ಯಾರೂ ಪ್ರೀತಿಯಿಲ್ಲದ ಬರಡು ಬಾಳನ್ನು ಊಹಿಸಿಕೊಳ್ಳಲೂ ಆರರು. ಪ್ರೀತಿಯೊಂದು ಜೊತೆಗಿದ್ದರೆ ಬರಡಾದ ಮರಳುಗಾಡಿನಲ್ಲಿಯೂ ವರ್ಷಗಟ್ಟಲೆ ಜೀವನ ನಡೆಸಬಲ್ಲ. ಎಂತಹ ಕಷ್ಟವನ್ನೂ ಸಹಿಸಿಕೊಳ್ಳಬಲ್ಲ. ಆದರೆ, ಈ ಪ್ರೀತಿಯಿಂದ ಅನೇಕ ಬಾರಿ ಮನಸ್ಸಿಗೆ ಅಸಹ್ಯ ವೇದನೆಯೂ ಕಟ್ಟಿಟ್ಟಿದ್ದೆ! ಅತ್ಯಂತ ಮೃದುವಾದ ಪ್ರೀತಿಯು ಅಷ್ಟು ವೇದನೆಯನ್ನು ನೀಡುತ್ತದೆಂಬ ಸಂಗತಿಯೆ ಸೋಜಿಗವನ್ನುಂಟುಮಾಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಪದೇ ಪದೇ ಅನುಭವಕ್ಕೆ ಬರುವ ಈ ಸತ್ಯವನ್ನು ಮರುಮಾತಿಲ್ಲದೆ ಒಪ್ಪಿಕೊಂಡರೂ ಅದಕ್ಕೆ ಬಹುಶಃ ಯಾವ ಪರಿಹಾರವೂ ಇರಲಿಕ್ಕಿಲ್ಲ, ಇದು ಲೋಕದ [...]

By |2017-05-14T23:40:54+05:30May 14th, 2017|Kannada Articles|0 Comments

ತಂತ್ರಶಾಸ್ತ್ರದಲ್ಲಿ ನಾಮಜಪ ಮತ್ತು ಮಂತ್ರದ ಮಹತ್ವ

ತಂತ್ರಶಾಸ್ತ್ರದ ವಿಸ್ತಾರ ಅಳತೆಗೆ ಮೀರಿದ್ದು. `ತನೂ ವಿಸ್ತಾರೇ' ಎಂಬ ಧಾತುವಿನಿಂದ ಆದ ನಿಷ್ಪತ್ತಿಯೇ ಈ ಶಾಸ್ತ್ರದ ಅಗಾಧತೆಯನ್ನು ತೋರಿಸಿಕೊಡುತ್ತದೆ. ಮಾನವನ ಇಹ ಪರಗಳ ಕಾಮನೆಗಳನ್ನು ಪುರೈಸುವುದಲ್ಲದೆ ಮೋಕ್ಷಕ್ಕೂ ಅನೇಕ ಮಾರ್ಗಗಳನ್ನು ತಂತ್ರವು ತೆರೆದಿಟ್ಟಿರುತ್ತದೆ. ಮಂತ್ರಶಾಸ್ತ್ರ ಈ ತಂತ್ರಶಾಸ್ತ್ರದ್ದೇ ಒಂದು ವಿಭಾಗವಾದರೂ ಇದರ ವಿಸ್ತಾರವೂ ಅಳತೆಗೆ ನಿಲುಕದ್ದೆ! ಆದ್ದರಿಂದ ಇದನ್ನೇ ಬೇರೆಯಾಗಿಯೂ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಸರಿಯಾದ ಸಂಪ್ರದಾಯವನ್ನು ಬಲ್ಲವರ ಕೊರತೆಯಿರುವುದರಿಂದಲೂ, ಯಾರೆಂದರೆ ಅವರಿಗೆ ಉಪದೇಶ ಮಾಡಬಾರದೆಂಬ ನಿಯಮವಿರುವುದರಿಂದಲೂ (`ಮತ್ರಿ ಗುಪ್ತಪರಿಭಾಷಣೇ' ಎಂಬ ಧಾತುವಿನಿಂದಲೂ ಮಂತ್ರಶಬ್ದ [...]

By |2017-05-14T23:33:42+05:30May 14th, 2017|Kannada Articles|0 Comments