HEEREKAI METHI KICHADI ಹೀರೇ ಕಾಯಿ ಮೇಥಿ ಕಿಚಡಿ
ಆರೋಗ್ಯಕ್ಕೆ ಹೀರೆಕಾಯಿ ಮತ್ತು ಮೆಂತ್ಯ ಸೊಪ್ಪು ಎರಡೂ ಬಹಳ ಒಳ್ಳೆಯದು!
ಈ ಆರೋಗ್ಯಕರವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
2 ಹೀರೇಕಾಯಿ, 1 ಕಟ್ಟು ಮೆಂತ್ಯ ಸೊಪ್ಪು, 1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.
1 ಲೋಟ ಅಕ್ಕಿ/ಗೋಧಿ ನುಚ್ಚು, 1/2 ಲೋಟ ಹೆಸರು ಬೇಳೆ ಸ್ವಲ್ಪ ಹುರಿದು ತೊಳೆದಿಡಿ. ನಾನು ಹಾಕಿರುವುದು ಗೋಧಿ ನುಚ್ಚು ! ( Broken wheat )
ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ ನಂತರ ಹೆಚ್ಚಿದ ಹೀರೇಕಾಯಿ, ಮೆಂತ್ಯ ಸೊಪ್ಪು ಹಾಕಿ ಬಾಡಿಸಿ.
ನಂತರ ತೊಳೆದ ಗೋಧಿ ನುಚ್ಚು ಹೆಸರು ಬೇಳೆ, ಉಪ್ಪು, 1/2 ಚಮಚ ಖಾರದ ಪುಡಿ, 1/2 ಗರಂ ಮಸಾಲ ಹಾಕಿ ಬಾಡಿಸಿ.
ಇದಕ್ಕೆ 4 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ ಮುಚ್ಚಳ ಹಾಕಿ 2 ವಿಷಲ್ ಕೂಗಿಸಿ. ಕೊನೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ ಆರೋಗ್ಯಕರವಾದ ಹೀರೆಕಾಯಿ ಮೇಥಿ ಕಿಚಡಿ ಸಿದ್ಧ!
ಧನ್ಯವಾದಗಳು