ಉಪ್ಮಾ / ಉಪ್ಪಿಟ್ಟು ಎಲ್ಲರ ಮನೆಯಲ್ಲೂ ಸಾಧಾರಣವಾಗಿ ಮಾಡುವ ತಿಂಡಿ! ಎಷ್ಟು ಲೆಕ್ಕ ಹಾಕಿ ಮಾಡಿದರೂ ಸ್ವಲ್ಪ ಉಳಿದು ಹೋಗತ್ತದೆ! ಮಿಕ್ಕ ಉಪ್ಪಿಟ್ಟಿನಿಂದ ರುಚಿಯಾದ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ!
ಮಿಶ್ರಣ ವಿಧಾನ:-
ಉಳಿದ ಉಪ್ಪಿಟ್ಟಿಗೆ ಸ್ವಲ್ಪಹೆಚ್ಚಿದ ಕೊತ್ತಂಬರಿ ಸೊಪ್ಪು, ಅದಕ್ಕೆ ಹಿಡಿಸುವಷ್ಟು ಕಡಲೇ ಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕಟ್ಲೆಟ್ ತಟ್ಟಿಡಿ.
2 ಚಮಚ ಕಾರ್ನ್ ಫ್ಲೋರ್ ಗೆ ಸ್ವಲ್ಪ ಉಪ್ಪು ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಗಂಟಿಲ್ಲದ ಹಾಗೆ ಕಲೆಸಿಡಿ.
ಕಟ್ಲೆಟ್ ಗಳನ್ನು ಈ ಹಿಟ್ಟಿನಲ್ಲಿ ಅದ್ದಿ ಚಿರೋಟಿ ರವೆಯಲ್ಲಿ ಹೊರಳಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಬೇಯಿಸಿದರೆ ರುಚಿಯಾದ ಉಪ್ಮಾ ಕಟ್ಲೆಟ್ ಸವಿಯಲು ಸಿದ್ಧ!
ಧನ್ಯವಾದಗಳು
Leave A Comment