ಆಲೂಗೆಡ್ಡೆ ಮತ್ತು ಬಟಾಣಿಯ ಸೂಪರ್ ಕಾಂಬಿನೇಶನ್! ಚಪಾತಿ, ಪುಲ್ಕಾ, ರೋಟಿ ಎಲ್ಲದರೊಂದಿಗೂ ಒಳ್ಳೆಯ ಕಾಂಬಿನೇಶನ್!

ಮಾಡುವ ವಿಧಾನ:-

1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ಹಸಿ ಬಟಾಣಿಯೊಂದಿಗೆ ಬೇಯಿಸಿಡಿ.

  

1 ಈರುಳ್ಳಿ, 2 ಟೋಮೋಟೋ, 4 ಎಸಳುಬೆಳ್ಳುಳ್ಳಿ, 1/2 ಶುಂಠಿ ಸಣ್ಣಗೆ ಹೆಚ್ಚಿ, 2 ಚಮಚ ಎಣ್ಣೆ, ಸ್ವಲ್ಪ ಗೋಡಂಬಿ ಹಾಕಿ ಹುರಿದು, ನುಣ್ಣಗೆ ರುಬ್ಬಿಡಿ.

  

ಬಾಣಲೆಯಲ್ಲಿ 4 ಚಮಚ ತುಪ್ಪ/ ಎಣ್ಣೆ ಹಾಕಿ ಜೀರಿಗೆ, ಅರಿಷಿಣ ಪುಡಿ ಹಾಕಿ ಹುರಿದು ರುಬ್ಬಿದ ಮಿಶ್ರಣ, 1 ಚಮಚ ಖಾರದ ಪುಡಿ, 1/2 ಚಮಚ ಗರಂ ಮಸಾಲ ಪುಡಿ, ಉಪ್ಪು ಹಾಕಿ ಸ್ವಲ್ಪ ಬಾಡಿಸಿ, ಕೊನೆಯಲ್ಲಿ ಬೇಯಿಸಿದ ಆಲೂಗಡ್ಡೆ, ಬಟಾಣಿ ಸ್ವಲ್ಪ ನೀರು ಹಾಕಿ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಕಸೂರಿ ಮೇಥಿ, 2 ಚಮಚ ಫ್ರೆಶ್ ಕ್ರೀಮ್ ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಆಲೂ ಮಟರ್ ಸವಿಯಲು ಸಿದ್ಧ!

ಧನ್ಯವಾದಗಳು