ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಬಜ್ಜಿ!

ಮಾಡುವ ವಿಧಾನ:-

ಬೇಬಿ ಕಾರ್ನ್ ಅನ್ನು ತೊಳೆದು ತೆಳ್ಳಗೆ ಸ್ಲೈಸ್ ಮಾಡಿಡಿ.

  

ಒಂದು ಬಟ್ಟಲಿನಲ್ಲಿ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, 1/2 ಚಮಚ ಚಾಟ್ ಮಸಾಲ, 1/2 ಚಮಚ ಜೀರಿಗೆ, ಉಪ್ಪು, ಸ್ವಲ್ಪ ಇಂಗು ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಬೇಬಿ ಕಾರ್ನ್ ಸ್ಲೈಸ್ ಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ ಕೆಂಪಗೆ, ಗರಿ ಗರಿಯಾಗುವಂತೆ ಕರಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಬೇಬಿ ಕಾರ್ನ್ ಬಜ್ಜಿ ಸವಿಯಲು ಸಿದ್ಧ!

ಬೇಬಿ ಕಾರ್ನ್ ಬದಲು ನಿಮಗೆ ಇಷ್ಟವಾಗುವ ಯಾವುದಾದರೂ ತರಕಾರಿಗಳನ್ನು ಹಾಕಿ ಇದೇ ರೀತಿ ಮಾಡಿಕೊಳ್ಳಬಹುದು!

ಧನ್ಯವಾದಗಳು