ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ಇದರ ರುಚಿಯಾದ ಗೊಜ್ಜು ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ನಿಮಗೆ ಇಷ್ಟವಾಗುವ ಯಾವುದಾದರೂ ಡ್ರೈ ಫ್ರೂಟ್ಸ್ ಗಳನ್ನು ಸಣ್ಣಗೆ ಹೆಚ್ಚಿಡಿ.

ಕಡಲೇ ಬೇಳೆ – 1 ಟೇಬಲ್ ಚಮಚ
ಉದ್ದಿನ ಬೇಳೆ – 1/2 ಟೇಬಲ್ ಚಮಚ
ಮೆಣಸು – 1/4 ಟೀ ಚಮಚ
ಬಿಳಿ ಎಳ್ಳು – 1 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8 ( ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ)

  

ಇಷ್ಟನ್ನೂ ಹುರಿದು 1 ಟೇಬಲ್ ಚಮಚ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಸಾಸಿವೆ, ಇಂಗು, ಹೆಚ್ಚಿದ ಡ್ರೈ ಫ್ರೂಟ್ಸ್, ಕರಿಬೇವು, ಚಿಟಿಕೆ ಅರಿಷಿಣ, ಕರಿಬೇವು ಹಾಕಿ ಸ್ವಲ್ಪ ಹುರಿದು, ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ.

    

2 ಚಮಚ ಹುಣಿಸೆ ರಸ, ಉಪ್ಪು, ಸ್ವಲ್ಪ ನೀರು, ಚೂರು ಬೆಲ್ಲ ಹಾಕಿ ಕುದಿಸಿದರೆ, ರುಚಿಯಾದ ಬಾಯಲ್ಲಿ ನೀರೂರಿಸುವ ಡ್ರೈ ಫ್ರೂಟ್ಸ್ ಗೊಜ್ಜು ಸಿದ್ಧ!

ಡ್ರೈ ಫ್ರೂಟ್ಸ್ ಬದಲು ಹುರಿದ ಬೆಂಡೆ ಕಾಯಿ, ಹಾಗಲ ಕಾಯಿ, ಪೈನಾಪಲ್ ಯಾವುದಾದರೂ ಒಂದುಹಾಕಿ ಈ ಗೊಜ್ಜು ಮಾಡಬಹುದು!

ಧನ್ಯವಾದಗಳು