ಸಂಜೆ ವೇಳೆಗೆ ಅಥವಾ ಅನ್ನ ಸಾರಿನೊಂದಿಗೆ Side dish ಆಗಿ ತಿನ್ನಬಹುದು! ಮಾಡುವುದು ಸುಲಭ!

ಮಾಡುವ ವಿಧಾನ:-

ದಪ್ಪ ದಪ್ಪ ಆಲೂಗೆಡ್ಡೆ ಒಂದು ವಿಷಲ್ ಕೂಗಿಸಿ ಸಿಪ್ಪೆ ತೆಗೆದು ತೆಳ್ಳಗೆ ಸ್ಲೈಸ್ ಮಾಡಿಡಿ.

1 ಈರುಳ್ಳಿ, 1 ಟೋಮೇಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

  

1/2 ಕ್ಯಾರೆಟ್ ತುರಿದಿಡಿ.

ತಟ್ಟೆಯಲ್ಲಿ 2 ಚಮಚ ಚಿರೋಟಿ ರವೆ, 1 ಚಮಚ ಹುರಿಗಡಲೆ ಪುಡಿ, 1/2 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, ಉಪ್ಪು, 1/2 ಚಮಚ ಆಮ್ ಚೂರ್ ಪುಡಿ ಹಾಕಿ ಚೆನ್ನಾಗಿ ಕಲೆಸಿ.

ಆಲೂಗೆಡ್ಡೆಯ ಸ್ಲೈಸ್ ಗಳನ್ನು ಈ ಪುಡಿಯಲ್ಲಿ ಹೊರಳಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವಂತೆ ಬೇಯಿಸಿಡಿ.

  

ನಂತರ ಈ ಆಲೂಗೆಡ್ಡೆ ಸ್ಲೈಸ್ ಗಳ ಮೇಲೆ ಹೆಚ್ಚಿದ ಈರುಳ್ಳಿ, ಟೋಮೇಟೋ, ಕ್ಯಾರೇಟ್ ತುರಿ, ಕೊತ್ತಂಬರಿ ಸೊಪ್ಪು ಉದುರಿಸಿ,ಮೇಲೆ ಸ್ವಲ್ಪ ಚಾಟ್ ಮಸಾಲ ಉದುರಿಸಿ ತಕ್ಷಣ ಸವಿಯಿರಿ!

ಇದೇ ತರಹ ಬೆಂದ ಸಿಹಿ ಗೆಣಸಿನಲ್ಲಿ ಮಾಡಬಹುದು!

ಅಥವಾ ಗುಂಡು ಬದನೆ ಅಥವಾ ಬಾಳೆ ಕಾಯಿಯಲ್ಲಿ ಕೂಡ ಮಾಡಬಹುದು! ಆದರೆ ಬೇಯಿಸದೆ ಹಾಗೆ ಹಸಿಯಾಗೆ ಕತ್ತರಿಸಿ ಮಾಡಬಹುದು!

ಧನ್ಯವಾದಗಳು