ಬ್ರೊಕ್ಲೀ ಎಂದರೆ ಗೋಭಿಯ ಹಾಗಿರುವ ಹಸಿರು ಬಣ್ಣದ ತರಕಾರಿ! ಇದರಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶಗಳು ತುಂಬಿವೆ. ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಬ್ರೊಕ್ಲೀ ಸೂಪಿನ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1 ಚಿಕ್ಕ ಬ್ರೊಕ್ಲೀಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ ಬಿಸಿ ನೀರಿನಲ್ಲಿ ಹಾಕಿ 10 ನಿಮಿಷ ಬಿಟ್ಟು ತೆಗೆದಿಡಿ.

1 ಚಿಕ್ಕ ಈರುಳ್ಳಿ ಸಣ್ಣಗೆ ಹೆಚ್ಚಿಡಿ.

  

4 ಬೆಳ್ಳುಳ್ಳಿ ಎಸಳು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

ಬಾಣಲೆಯಲ್ಲಿ 2 ಚಮಚ ಬೆಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಹುರಿದು ಬ್ರೊಕ್ಲೀ ತುಂಡುಗಳನ್ನು ಹಾಕಿ ಸ್ವಲ್ಪ ನೀರು ಹಾಕಿ 8 ರಿಂದ 10 ನಿಮಿಷ ಬ್ರೊಕ್ಲೀ ಸಂಪೂರ್ಣವಾಗಿ ಬೇಯಿಸಿ.

  

ನಂತರ ನೀರಿನಿಂದ ತೆಗೆದು ಬ್ಲೆಂಡರ್ ನಲ್ಲಿ ರುಬ್ಬಿ.

ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿಗೆ ಹಾಕಿ, ಉಪ್ಪು, 1/2 ಚಮಚ ಕರಿ ಮೆಣಸಿನ ಪುಡಿ ಹಾಕಿ ಕುದಿಸಿ.

ಕೊನೆಯಲ್ಲಿ 2 ಚಮಚ ಫ್ರೆಶ್ ಕ್ರೀಮ್ ಹಾಕಿದರೆ ರುಚಿಯಾದ ಬ್ರೊಕ್ಲೀ ಸೂಪ್ ಸವಿಯಲು ಸಿದ್ಧ!

ಧನ್ಯವಾದಗಳು