ಬೇಸಿಗೆಗೆ ಒಂದು ತಂಪಾದ ಪಾನೀಯ! ವಾಟರ್ ಮೆಲನ್ ಸ್ಮೂದಿ! ಬೇಸಿಗೆಗೆ ತಂಪು ಮಾಡುವ ಕಲ್ಲಂಗಡಿ ಹಣ್ಣಿನ ರುಚಿಯಾದ ಸ್ಮೂದಿಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1/2 ಕಲ್ಲಂಗಡಿ ಹಣ್ಣು ಸಿಪ್ಪೆ, ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ.

1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

  

4 ಪುದೀನಾ ಎಲೆ ತೊಳೆದಿಡಿ ( ಬೇಕಾದರೆ )

ಮಿಕ್ಸರ್ ಜಾರಿಗೆ ಹಣ್ಣಿನ ತುಂಡುಗಳು, ಶುಂಠಿ ತುರಿ, ಪುದೀನಾ ಎಲೆ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿ, ಕೊನೆಯಲ್ಲಿ ಐಸ್ ಕ್ಯೂಬ್ ಹಾಕಿ ಸವಿಯಿರಿ!

  

ಸಕ್ಕರೆ ಬೇಕಾದರೆ ಹಾಕಿಕೊಳ್ಳಬಹುದು. ಕಲ್ಲಂಗಡಿ ಹಣ್ಣಿನಲ್ಲಿರುವ ಸಿಹಿ ಅಂಶವೇ ಸಾಕಾಗುವುದು!

ಧನ್ಯವಾದಗಳು