HESARUBELE UPPITTU ಹೆಸರು ಬೇಳೆ ಉಪ್ಪಿಟ್ಟು
ಬೇಸಿಗೆಗೆ ಒಂದು ತಂಪಾದ ಉಪ್ಪಿಟ್ಟು! ಹೆಸರು ಬೇಳೆಯನ್ನು ಈ ಬೇಸಿಗೆಯಲ್ಲಿ ಎಷ್ಟು ತಿಂದರೂ ಒಳ್ಳೆಯದು! ಹೆಸರು ಬೇಳೆಯ ರುಚಿಯಾದ ಉಪ್ಪಿಟ್ಟು ಮಾಡುವ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
1 ಲೋಟ ಹೆಸರು ಬೇಳೆ ತೊಳೆದು 1 ಗಂಟೆ ನೆನೆಸಿ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ.
ಇದಕ್ಕೆ 1/2 ಲೋಟ ಅಕ್ಕಿ ತರಿ ಹಾಕಿ ಚೆನ್ನಾಗಿ ಕಲೆಸಿ 1/2 ಗಂಟೆ ನೆನೆಸಿಡಿ.
ಈ ಮಿಶ್ರಣವನ್ನು ಕುಕ್ಕರಿನಲ್ಲಿ ಇಡ್ಲಿಯ ಹಾಗೆ ಎಣ್ಣೆ ಸವರಿದ ಬಟ್ಟಲಿನಲ್ಲಿ ಹಾಕಿ 10 ನಿಮಿಷ ಬೇಯಿಸಿಡಿ. ನಂತರ ಸ್ವಲ್ಪ ಬೆಚ್ಚಗಿರುವಾಗ ಕೈಯಿಂದ ಪುಡಿ ಮಾಡಿಡಿ.
2 ಈರುಳ್ಳಿ, 6 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
6 ಚಮಚ ಕಾಯಿ ತುರಿದಿಡಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವು ಹಾಕಿ ಬಾಡಿಸಿ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿದು ನಂತರ ಉಪ್ಪು, ಪುಡಿ ಮಾಡಿದ ಹೆಸರು ಬೇಳೆ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಿ.
ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಾಯಿ ತುರಿ, 1/2 ನಿಂಬೆ ಹಣ್ಣಿನ ರಸ ಹಾಕಿ ಕಲೆಸಿದರೆ ರುಚಿಯಾದ, ದೇಹಕ್ಕೆ ತಂಪು ನೀಡುವ ಹೆಸರುಬೇಳೆ ಉಪ್ಪಿಟ್ಟು ಸಿದ್ಧ!
ಧನ್ಯವಾದಗಳು