KOSAMBARI ಕೋಸಂಬರಿ
ಕೋಸಂಬರಿ ನಾವೂ ಮಾಡ್ತೀವಿ ಯಾವಾಗಲೂ ಅದರ ರೆಸಿಪಿ ಯಾಕೆ ಅಂದುಕೊಂಡಿರಾ!!! ಇದು ಸ್ವಲ್ಪ ವಿಶೇಷವಾದ ರೆಸಿಪಿ! ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು!
ಮಾಡುವ ವಿಧಾನ:-
1 ಚಿಕ್ಕ ಲೋಟ ಹೆಸರು ಬೇಳೆ ತೊಳೆದು 2 ಗಂಟೆ ನೆನೆಸಿ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿ, ನೀರು ಸೋರಿ ಹಾಕಿಡಿ. ಹೆಸರು ಬೇಳೆ ಬೇಯಿಸಿದ ನೀರನ್ನು ಚೆಲ್ಲದೆ ರಸಂ, ಸಾಂಬಾರು ಮಾಡುವಾಗ ಉಪಯೋಗಿಸಿ.
1 ಸೌತೇ ಕಾಯಿ ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
6 ಚಮಚ ಕಾಯಿ ತುರಿದಿಡಿ.
4 ಬಾಳಕದ ಮೆಣಸಿನಕಾಯಿ ಬಿಸಿ ಎಣ್ಣೆಯಲ್ಲಿ ಕೆಂಪಗೆ ಕರಿದು ಪುಡಿ ಮಾಡಿಡಿ.
ದೊಡ್ಡ ಬಟ್ಟಲಿನಲ್ಲಿ ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳು ಹಾಕಿಡಿ.
ಚಿಕ್ಕ ಬಾಣಲೆಯಲ್ಲಿ ಒಗ್ಗರಣೆಗೆ 1 ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು ಹಾಕಿ ಹೆಸರುಬೇಳೆ ಮಿಶ್ರಣಕ್ಕೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, 1/2 ನಿಂಬೆ ಹಣ್ಣಿನ ರಸ ಹಾಕಿ ಕಲೆಸಿದರೆ ರುಚಿಯಾದ, ಆರೋಗ್ಯಕರವಾದ ಕೋಸಂಬರಿ ಸವಿಯಲು ಸಿದ್ಧ!
ಮೊದಲೇ ಉಪ್ಪು ಹಾಕಿದರೆ ನೀರು ಬಿಟ್ಟುಕೊಳ್ಳುತ್ತದೆ. ತಿನ್ನುವ ಮೊದಲು ಉಪ್ಪು ಹಾಕಿ ತಕ್ಷಣವೇ ಸವಿಯಿರಿ!
ಧನ್ಯವಾದಗಳು