ಸಾಧಾರಣವಾಗಿ ಮೊಸರನ್ನ ಎಲ್ಲರೂ ಅನ್ನದಿಂದ ಮಾಡುವುದು. ಗಟ್ಟಿ ಅವಲಕ್ಕಿಯಿಂದ ಮಾಡುವುದೇ ಈ ರೆಸಿಪಿಯ ವಿಶೇಷತೆ!

ಮಾಡುವ ವಿಧಾನ:-

1 ಲೋಟ ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ತೊಳೆದು 1/2 ಗಂಟೆ ನೆನೆಸಿ ನೀರು ಸೋರಿ ಹಾಕಿಡಿ.

4 ಚಮಚ ಕಾಯಿ ತುರಿದಿಡಿ.

2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

4 ಚಮಚ ದಾಳಿಂಬೆ ಬೀಜ ಬಿಡಿಸಿಡಿ.

ಚಿಕ್ಕ ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಶುಂಠಿ ತುರಿ, ಕರಿಬೇವು, ಹಸಿ ಮೆಣಸಿನಕಾಯಿ, ಚಿಟಿಕೆ ಇಂಗು, ಸ್ವಲ್ಪ ಗೋಡಂಬಿ ಹಾಕಿ ಹುರಿದಿಡಿ.

ದೊಡ್ಡ ಬಟ್ಟಲಿನಲ್ಲಿ ನೆನೆಸಿದ ಅವಲಕ್ಕಿ, ದಾಳಿಂಬೆ ಬೀಜ, ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು, ಒಗ್ಗರಣೆ, ಅದಕ್ಕೆ ಹಿಡಿಸುವಷ್ಟು ಗಟ್ಟಿಯಾದ ತಾಜಾ ಮೊಸರು ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಮೊಸರವಲಕ್ಕಿ ಸಿದ್ಧ!

ಹಸಿ ಮೆಣಸಿನಕಾಯಿ ಬದಲಾಗಿ ಕರಿದ ಬಾಳಕದ ಮೆಣಸಿನಕಾಯಿ ಹಾಕಬಹುದು!

ಇದೇ ರೀತಿ ಅನ್ನದಲ್ಲಿ ಬೇಕಾದರೆ ಮಾಡಬಹುದು!

ಧನ್ಯವಾದಗಳು