ಬಟಾಣಿ ಮತ್ತು ಪನ್ನೀರ್ ಬಳಸಿ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ!
1/4 ಕೇಜಿ ಬಟಾಣಿ ಬಿಡಿಸಿ ಬೇಯಿಸಿಡಿ.
1 ಟೇಬಲ್ ಚಮಚ ಗಸಗಸೆ 8 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ ನುಣ್ಣಗೆ ರುಬ್ಬಿಡಿ.
3 ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದು ಗಸಗಸೆ ಜೊತೆಗೆ ರುಬ್ಬಿಡಿ.
1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
100 ಗ್ರಾಂ ಪನ್ನೀರ್ ತುರಿದು, 1 ಚಮಚ ಕಾರ್ನ್ ಫ್ಲೋರ್, ಚಿಟಿಕೆ ಉಪ್ಪು, ಚಿಟಿಕೆ ಪೆಪ್ಪರ್ ಪುಡಿ ಹಾಕಿ ಚೆನ್ನಾಗಿ ಕಲೆಸಿ ಪುಟ್ಟ ಪುಟ್ಟ ಉಂಡೆ ಮಾಡಿ ಬಿಸಿಯಾದ ಎಣ್ಣೆಯಲ್ಲಿ ಕರಿದಿಡಿ.
ಮಿಶ್ರಣ ಕಲೆಸಲು ಪನ್ನೀರ್ ನಲ್ಲಿರುವ ನೀರಿನ ಅಂಶವೇ ಸಾಕು! ಬೇಕಾದರೆ ಸ್ವಲ್ಪ ನೀರು ಚಿಮುಕಿಸಬಹುದು. ಜಾಮೂನ್ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಬೇಕು.
ಬಾಣಲೆಯಲ್ಲಿ 4 ಚಮಚ ಎಣ್ಣೆ/ ತುಪ್ಪ ಹಾಕಿ ಬಿಸಿಯಾಗಲು ಇಡಿ. ನಂತರ ಜೀರಿಗೆ, ಹೆಚ್ಚಿದ ಈರುಳ್ಳಿ, ಚಿಟಿಕೆ ಅರಿಷಿಣ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಸ್ವಲ್ಪ ಬಾಡಿಸಿ.
ನಂತರ ರುಬ್ಬಿದ ಮಿಶ್ರಣ, 1 ಚಮಚ ಖಾರದ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು, ಬೆಂದ ಬಟಾಣಿ ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ಚಮಚ ಫ್ರೆಶ್ ಕ್ರೀಮ್, ಪನ್ನೀರ್ ಉಂಡೆಗಳನ್ನು ಹಾಕಿದರೆ ಬಾಯಲ್ಲಿ ನೀರೂರಿಸುವ ಪೀಸ್ ಪನ್ನೀರ್ ಬಾಲ್ಸ್ ಕರ್ರಿ ಸಿದ್ಧ!
ಪನ್ನೀರ್ ಬಾಲ್ಸ್ ಮಾಡುವ ಬದಲು ಇದೇ ರೆಸಿಪಿಯಲ್ಲಿ ಪನ್ನೀರ್ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಎಣ್ಣೆಯಲ್ಲಿ ಕರಿದು ಬೇಕಾದರೂ ಹಾಕಬಹುದು!
ಧನ್ಯವಾದಗಳು
Leave A Comment