ಬೆಲ್ಲದಿಂದ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

2 ಲೋಟ ಬೆಲ್ಲ ಸಣ್ಣಗೆ ಹೆಚ್ಚಿಡಿ.

2 ಲೋಟ ಹುರಿಗಡಲೆ ( ಪುಟಾಣಿ ) ನುಣ್ಣಗೆ ಪುಡಿ ಮಾಡಿಡಿ.

    

1 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.

1/2 ಲೋಟ ಒಣ ಕೊಬ್ಬರಿ ತುರಿದಿಡಿ.

1/2 ಲೋಟ ಬಿಳಿ ಎಳ್ಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ.

4 ಏಲಕ್ಕಿ ಪುಡಿ ಮಾಡಿಡಿ.

ಬಾಣಲೆಯಲ್ಲಿ ಬೆಲ್ಲದ ಪುಡಿಗೆ 1/2 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. ಬೆಲ್ಲ ಕರಗಿ ಕುದಿಯಲು ಪ್ರಾರಂಭವಾಗಿ ಒಂದೆಳೆ ಪಾಕ ಬಂದೊಡನೆ ಒಲೆಯಿಂದ ಇಳಿಸಿ.

  

ದೊಡ್ಡ ಬಟ್ಟಲಿನಲ್ಲಿ ಬೇರೆ ಎಲ್ಲಾ ಸಾಮಗ್ರಿಗಳನ್ನು ಹಾಕಿ, ಬೆಲ್ಲದ ಪಾಕ ಹಾಕಿ ಬೇಗ ಬೇಗನೆ ಕಲೆಸಿ.

ಸ್ವಲ್ಪ ಬೆಚ್ಚಗೆ ಇರುವಾಗಲೇ ಪುಟ್ಟ ಪುಟ್ಟ ಉಂಡೆ ಮಾಡಿದರೆ, ರುಚಿಯಾದ, ಪೌಷ್ಟಿಕವಾದ ಹುರಿಗಡಲೆ ಉಂಡೆ ಸವಿಯಲು ಸಿದ್ಧ!

ಧನ್ಯವಾದಗಳು