BELLA & DRY FRUITS LASSI ಬೆಲ್ಲ & ಡ್ರೈ ಫ್ರೂಟ್ಸ್ ಲಸ್ಸಿ
Indu Jayaram
SHARE
ಬೇಸಿಗೆ ಕಾಲದಲ್ಲಿ ಕುಡಿಯಲು ಬಯಸುವ ಪಾನೀಯಗಳಲ್ಲಿ ಲಸ್ಸಿ ಕೂಡ ಒಂದು! ದೇಹವನ್ನು ತಂಪಾಗಿಡುವುದರಲ್ಲಿ ಈ ಪಾನೀಯ ಸಹಕರಿಸುತ್ತದೆ! ಲಸ್ಸಿಯನ್ನು ಸಾಧಾರಣವಾಗಿ ಸಕ್ಕರೆ ಹಾಕಿ ಮಾಡುವುದು! ಆದರೆ ಆರೋಗ್ಯಕರವಾದ ಬೆಲ್ಲ ಹಾಕಿ ಮಾಡುವುದೇ ಈ ರೆಸಿಪಿಯ ವಿಶೇಷತೆ!
ಮಾಡುವ ವಿಧಾನ:-
ನಿಮಗೆ ಇಷ್ಟವಾದ ಡ್ರೈ ಫ್ರೂಟ್ಸ್ ಗಳನ್ನು ಏಲಕ್ಕಿಯೊಂದಿಗೆ ನುಣ್ಣಗೆ ಪುಡಿ ಮಾಡಿಡಿ.
2 ಚಮಚ ಬೆಲ್ಲ ಪುಡಿ ಮಾಡಿಡಿ.
1 ಲೋಟ ಗಟ್ಟಿಯಾದ ಸಿಹಿ ಮೊಸರು, ಡ್ರೈ ಫ್ರೂಟ್ಸ್ ಪುಡಿ, ಬೆಲ್ಲದ ಪುಡಿ, ಚಿಟಿಕೆ ಉಪ್ಪು ಹಾಕಿ Mixie jar ಅಥವಾ Blender ನಲ್ಲಿ 2 ರಿಂದ 3 ನಿಮಿಷ ತಿರುಗಿಸಿ Fridge ನಲ್ಲಿಟ್ಟು ನಿಮಗೆ ಬೇಕಾದಾಗ ಸವಿಯಿರಿ!
ಬೆಲ್ಲ ಇಷ್ಟವಿಲ್ಲದವರು ಸಕ್ಕರೆಹಾಕಿ ಮಾಡಿಕೊಳ್ಳಬಹುದು!
ಧನ್ಯವಾದಗಳು