ರವಾ ಇಡ್ಲಿ ಎಲ್ಲರೂ ಇಷ್ಟಪಡುವ ತಿಂಡಿ! ರುಚಿಯಾದ ರವಾ ಇಡ್ಲಿಯನ್ನು ಮತ್ತಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ನಿಮಗೆ ಇಷ್ಟವಾದ ಯಾವುದಾದರೂ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಬೆಯಲ್ಲಿ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಬಟಾಣಿ ಈ ತರಹದ ತರಕಾರಿಗಳನ್ನು ಹಾಕಬಹುದು.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವು, 1 ಲೋಟ ಮೀಡಿಯಂ ರವೆ ( ಉಪ್ಪಿಟ್ಟು ರವೆ ) ಹಾಕಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.

ಒಲೆಯಿಂದ ಇಳಿಸಿ ತಣ್ಣಗಾದ ನಂತರ 1/2 ಲೋಟ ಮೊಸರು,ಬೆಂದ ತರಕಾರಿ, ಉಪ್ಪು ಹಾಕಿ ಕಲೆಸಿ 3 ನಿಮಿಷ ಮುಚ್ಚಿಡಿ.

   

ಕುಕ್ಕರಿನಲ್ಲಿ ನೀರು ಬಿಸಿಯಾಗಲು ಇಡಿ. ಗಟ್ಟಿಯಾದ ರವೆ ಮಿಶ್ರಣಕ್ಕೆ 1/2 ಲೋಟ ನೀರು, ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ಪ್ಯಾಕೇಟ್ ಇನೋ ಸಾಲ್ಟ್ ಹಾಕಿ ( ಅಥವಾ ಚಿಟಿಕೆ ಸೋಡಾ) ಕಲೆಸಿ ಎಣ್ಣೆ ಸವರಿದ ಇಡ್ಲಿ ತಟ್ಟೆಗೆ ಸುರಿದು ಕುಕ್ಕರಿನಲ್ಲಿ 12 ರಿಂದ 14 ನಿಮಿಷ ಬೇಯಿಸಿದರೆ, ರುಚಿಯಾದ, ಆರೋಗ್ಯಕರವಾದ ವೆಜಿಟೇಬಲ್ಸ್ ರವಾ ಇಡ್ಲಿ ರೆಡಿ!

ಧನ್ಯವಾದಗಳು