METHI PEAS RICE ಮೇಥಿ ಪೀಸ್ ರೈಸ್

Categories: Kannada, OotaPublished On: March 4, 20180 Comments0.5 min read
Indu Jayaram
SHARE

ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು! ಈ ಸೊಪ್ಪಿನಿಂದ ಮಾಡುವ ರುಚಿಯಾದ, ಆರೋಗ್ಯಕರವಾದ ರೈಸ್ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

2 ಕಟ್ಟು ಮೆಂತ್ಯ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.

    

1 ಲೋಟ ಜೀರಾ ಅಕ್ಕಿ ತೊಳೆದು 30 ನಿಮಿಷ ನೆನೆಸಿ ಸೋರಿ ಹಾಕಿಡಿ.

1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಟೀ ಚಮಚ ಸೋಂಪು, 4 ಹಸಿ ಮೆಣಸಿನಕಾಯಿ, 1 ಹಿಡಿ ಕೊತ್ತಂಬರಿ ಸೊಪ್ಪು ಸ್ವಲ್ಪ ನೀರು ಸೇರಿಸಿ ಚಟ್ನಿಯ ಹದಕ್ಕೆ ರುಬ್ಬಿಡಿ.

   

1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿಡಿ.

1/2 ಲೋಟ ಬಟಾಣಿ ಬಿಡಿಸಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಟೋಮೇಟೋ, ಬಟಾಣಿ, ಹೆಚ್ಚಿದ ಮೆಂತ್ಯ ಸೊಪ್ಪು, ಚಿಟಿಕೆ ಅರಿಷಿಣ, 2 ಪಲಾವ್ ಎಲೆ, ಸ್ವಲ್ಪ ಗೋಡಂಬಿ, ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ, ಕೊನೆಯಲ್ಲಿ ನೆನೆಸಿದ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲೆಸಿ 1 ಅಥವಾ 1 1/4 ಲೋಟ ನೀರು ಹಾಕಿ ಮುಚ್ಚಳ ಹಾಕಿ 2 ವಿಷಲ್ ಕೂಗಿಸಿದರೆ ರುಚಿಯಾದ ಘಮ ಘಮಿಸುವ ಮೇಥಿ ಪೀಸ್ ರೈಸ್ ಸವಿಯಲು ಸಿದ್ಧ!

ಜೀರಾ ಅಕ್ಕಿಯ ಬದಲು ಸಾಧಾರಣ ಅಕ್ಕಿ ಅಥವಾ ಬಾಸುಮತಿ ಅಕ್ಕಿ ಸಹ ಹಾಕಬಹುದು. ಆಗ ನೀರು ಒಂದು ಅಳತೆಗೆ ಎರಡು ಅಳತೆ ನೀರು ಹಾಕಬೇಕು.

ಧನ್ಯವಾದಗಳು

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment