ಹೋಟೆಲ್ ಗಳಲ್ಲಿ ನಾವು ಸಾಮಾನ್ಯವಾಗಿ ತಿನ್ನುವ ರುಚಿಯಾದ, ಸುಲಭವಾಗಿ ಮಾಡಬಹುದಾದ ಗ್ರೇವಿಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1/4 ಕೇಜಿ ಬೇಬಿ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದಿಡಿ.

1 ದೊಡ್ಡ ಈರುಳ್ಳಿ, 2 ಹಸಿ ಮೆಣಸಿನಕಾಯಿ, 6 ಬ್ಯಾಡಗಿ ಮೆಣಸಿನಕಾಯಿ, 1 ಇಂಚು ಶುಂಠಿ, 1 ಚಿಕ್ಕ ಬೆಳ್ಳುಳ್ಳಿ, 1 ಟೀ ಚಮಚ ಸೋಂಪು, 10 ಗೋಡಂಬಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. ತಣ್ಣಗಾದ ನಂತರ ನುಣ್ಣಗೆ ರುಬ್ಬಿಡಿ.

  

ಕುದಿಯುತ್ತಿರುವ ನೀರಿಗೆ 2 ದೊಡ್ಡ ಟೋಮೇಟೋ ಹಾಕಿ ಸ್ವಲ್ಪ ಸಮಯ ತಟ್ಟೆ ಮುಚ್ಚಿಡಿ. ಒಲೆಯಿಂದ ಇಳಿಸಿ ತಣ್ಣಗಾದ ಮೇಲೆ ಟೋಮೇಟೋ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ/ ಎಣ್ಣೆ ಹಾಕಿ ಜೀರಿಗೆ, ಚಿಟಿಕೆ ಅರಿಶಿಣ ಹಾಕಿ ರುಬ್ಬಿದ ಈರುಳ್ಳಿ ಮಿಶ್ರಣ, 1/2 ಚಮಚ ಗರಂ ಮಸಾಲ ಪುಡಿ ಹಾಕಿ ಸ್ವಲ್ಪ ಬಾಡಿಸಿ.

ನಂತರ ಟೋಮೇಟೋ ಪೇಸ್ಟ್, ಬೆಂದ ಆಲೂಗೆಡ್ಡೆ, ಉಪ್ಪು, ಸ್ವಲ್ಪ ನೀರು ಬೇಕಾದರೆ ಹಾಕಿ ಕುದಿಸಿ.

 

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ಚಮಚ ಫ್ರೆಶ್ ಕ್ರೀಮ್ ಹಾಕಿದರೆ, ರುಚಿಯಾದ, ಬಾಯಲ್ಲಿ ನೀರೂರಿಸುವ ದಂ ಆಲೂ ಸಿದ್ಧ!

ಬೇಬಿ ಆಲೂ ಸಿಗದಿದ್ದರೆ ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡದಾಗಿ ಹೆಚ್ಚಿ ಹಾಕಿ ಮಾಡಬಹುದು!

ಬೆಂದ ಆಲೂಗೆಡ್ಡೆ ಎಣ್ಣೆಯಲ್ಲಿ ಕರಿದು ಬೇಕಾದರೆ ಹಾಕಬಹುದು. ನಾನು ಹಾಗೇ ಹಾಕಿದ್ದೇನೆ.

ಧನ್ಯವಾದಗಳ