ಸಂಜೆ ಕಾಫಿ, ಟೀ ಜೊತೆಗೆ ತಿನ್ನಲು ಸೊಗಸಾಗಿರುತ್ತದೆ!

ಮಾಡುವ ವಿಧಾನ:-

ಕಾರ್ನ್ ಫ್ಲೇಕ್ಸ್ ಅನ್ನು ಬಿಸಿ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು, ಬಿಸಿ ಇದ್ದಾಗಲೇ ಖಾರದ ಪುಡಿ, ಉಪ್ಪು, ಇಂಗಿನ ಪುಡಿ ಹಾಕಿ ಚೆನ್ನಾಗಿ ಕಲೆಸಿಡಿ.

1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1 ಕ್ಯಾರೆಟ್ ಸಿಪ್ಪೆ ತೆಗೆದು ತುರಿದಿಡಿ.

1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 2 ಹಸಿ ಮೆಣಸಿನಕಾಯಿ, 1/2 ನಿಂಬೆ ರಸ, ಉಪ್ಪು ಸೇರಿಸಿ ರುಬ್ಬಿ ಹಸಿರು ಚಟ್ನಿ ಮಾಡಿಡಿ.

ನಿಂಬೆ ಗಾತ್ರದ ಹುಣಿಸೆ ಹಣ್ಣು, ಚೂರು ಬೆಲ್ಲ, 4 ಕರ್ಜೂರ ನುಣ್ಣಗೆ ರುಬ್ಬಿ, ಸೋಸಿ, ಕುದಿಸಿ ಸಿಹಿ ಚಟ್ನಿ ಮಾಡಿಡಿ.

  

ಕರಿದ ಕಾರ್ನ್ ಫ್ಲೇಕ್ಸ್, ಹೆಚ್ಚಿದ ಈರುಳ್ಳಿ, ಟೋಮೇಟೋ, ಕೊತ್ತಂಬರಿ ಸೊಪ್ಪು, ಕ್ಯಾರೆಟ್ ತುರಿ, ಸ್ವಲ್ಪ ಹಸಿರು ಚಟ್ನಿ, ಸ್ವಲ್ಪ ಸಿಹಿ ಚಟ್ನಿ, ಸ್ವಲ್ಪ ಚಾಟ್ ಮಸಾಲ ಹಾಕಿ ಮೃದುವಾಗಿ ಕಲೆಸಿ ತಕ್ಷಣ ಸವಿಯಿರಿ!

ಧನ್ಯವಾದಗಳು