ಚಪಾತಿ, ಪುಲ್ಕಾ, ರೊಟ್ಟಿ, ಅನ್ನ ಎಲ್ಲದರ ಜೊತೆಗೆ ಚೆನ್ನಾಗಿರುವ ಪೈನಾಪಲ್ ಹಣ್ಣಿನ ಕರ್ರಿ ಮಾಡುವ ವಿಧಾನ ಇಲ್ಲಿದೆ!

ಮಾಡುವ ವಿಧಾನ:-

1 ಚಿಕ್ಕ ಪೈನಾಪಲ್ ಸಣ್ಣಗೆ ಹೆಚ್ಚಿಡಿ.

ಧನಿಯಾ – 1 ಟೇಬಲ್ ಚಮಚ
ಎಳ್ಳು – 1 ಟೇಬಲ್ ಚಮಚ ಚಮಚ
ಮೆಂತ್ಯ – 1/2 ಟೀ ಚಮಚ
ಮೆಣಸು – 1/4 ಟೀ ಚಮಚ
ಜೀರಿಗೆ – 1/2 ಟೀ ಚಮಚ
ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8

  

ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ. ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ.

1 ಟೇಬಲ್ ಚಮಚ ತೆಂಗಿನ ಕಾಯಿ ತುರಿ ಜೊತೆಗೆ ಹಾಕಿ ನುಣ್ಣಗೆ ರುಬ್ಬಿಡಿ.

  

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ. ಒಗ್ಗರಣೆಗೆ ಸಾಸಿವೆ, ಕರಿಬೇವು, ಚಿಟಿಕೆ ಅರಿಷಿಣ, ಹೆಚ್ಚಿದ ಪೈನಾಪಲ್ ಹಾಕಿ ಸ್ವಲ್ಪ ಬಾಡಿಸಿ.

ಹಣ್ಣು ಸ್ವಲ್ಪ ಮೆತ್ತಗಾದ ಮೇಲೆ ರುಬ್ಬಿದ ಮಿಶ್ರಣ, ಸ್ವಲ್ಪ ನೀರು, ಉಪ್ಪು ಹಾಕಿ ಕುದಿಸಿ.

  

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಪೈನಾಪಲ್ ಕರ್ರಿ ಸಿದ್ಧ!

ಧನ್ಯವಾದಗಳು