ಮುಂಬಯಿಯ ಇನ್ನೊಂದು ಜನಪ್ರಿಯ Street food! ರುಚಿಕರ, ಮಾಡುವುದು ಸುಲಭ ಕೂಡ!

ಮಾಡುವ ವಿಧಾನ:-

2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ.

ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ 1 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ, ಹಸಿ ಮೆಣಸಿನಕಾಯಿ ಪೇಸ್ಟ್, ಉಪ್ಪು, ಪುಡಿ ಮಾಡಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ ಚಪ್ಪಟೆಯಾಗಿ ವಡಾ ತಟ್ಟಿಡಿ.

 

ಬೋಂಡಾ ಹಿಟ್ಟು :-

1 ಚಿಕ್ಕ ಬಟ್ಟಲು ಕಡಲೇ ಹಿಟ್ಟು, 1/2 ಚಮಚ ಖಾರದ ಪುಡಿ, ಉಪ್ಪು, ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಆಲೂ ಮಿಶ್ರಣವನ್ನು ಕಡಲೇ ಹಿಟ್ಟಿನಲ್ಲಿ ಅದ್ದಿ ಕೆಂಪಗಾಗುವವರೆಗೆ ಕರಿದು ತೆಗೆದಿಡಿ.

 

ಬೆಳ್ಳುಳ್ಳಿ ಚಟ್ನಿ ಪುಡಿ :-

1 ಬಟ್ಟಲು ಕಡಲೇ ಬೀಜ ಹುರಿದು ತೆಗೆದಿಡಿ.

1 ಬಟ್ಟಲು ಒಣ ಕೊಬ್ಬರಿ ತುರಿದು ಸ್ವಲ್ಪ ಬಿಸಿ ಮಾಡಿಡಿ.

1/2 ನಿಂಬೆ ಗಾತ್ರದ ಹುಣಿಸೆ ಹಣ್ಣು ಸ್ವಲ್ಪ ಬಿಸಿ ಮಾಡಿಡಿ.

ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ.

10 ರಿಂದ 12 ಕೆಂಪು ಮೆಣಸಿನಕಾಯಿ ಹುರಿದು, ಪುಡಿ ಮಾಡಿಡಿ.

ಮೇಲೆ ಹೇಳಿದ ಎಲ್ಲಾ ಸಾಮಾನುಗಳನ್ನು ಉಪ್ಪು ಸೇರಿಸಿ ಪುಡಿ ಮಾಡಿದರೆ ಬೆಳ್ಳುಳ್ಳಿ ಚಟ್ನಿ ಪುಡಿ ಸಿದ್ಧ!

  

ಪಾವ್ ಅನ್ನು ಮಧ್ಯದಲ್ಲಿ ಮುಕ್ಕಾಲು ಭಾಗ ಕಟ್ ಮಾಡಿ. ಒಂದು ಭಾಗಕ್ಕೆ ಸ್ವಲ್ಪ ಬೆಣ್ಣೆ ಸವರಿ ಸ್ವಲ್ಪ ಚಟ್ನಿ ಉದುರಿಸಿ ಮಧ್ಯದಲ್ಲಿ ಒಂದು ವಡಾ ಇಟ್ಟು ಸವಿಯಿರಿ!

ನೀವು ಬೇಕಾದರೆ ಒಳ ಭಾಗಕ್ಕೆ ಹಸಿರು ಚಟ್ನಿ ಅಥವಾ ಸಿಹಿ ಚಟ್ನಿ ಬೇಕಾದರೂ ಸವರಿ ಮಧ್ಯದಲ್ಲಿ ವಡಾ ಇಟ್ಟು ತಿನ್ನಬಹುದು!

ಧನ್ಯವಾದಗಳು