ಪನ್ನೀರ್ ನಿಂದ ಮಾಡುವ ರುಚಿಯಾಗಿ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

100 ಗ್ರಾಂ ಪನ್ನೀರ್ ತುರಿದಿಡಿ/ ಪುಡಿ ಮಾಡಿಡಿ.

  

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿಯಿರಿ.

ನಂತರ ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ, 1 ಚಮಚ ಖಾರದ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು, ತುರಿದ ಪನ್ನೀರ್, ಸ್ವಲ್ಪ ಕಸೂರಿ ಮೇಥಿ ( Optional) ಹಾಕಿ ಚೆನ್ನಾಗಿ ಕಲೆಸಿ.

  

ಕೊನೆಯಲ್ಲಿ ಎರಡು ಚಮಚ ಫ್ರೆಶ್ ಕ್ರೀಮ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಷಾಹಿ ಪನ್ನೀರ್ ಸಿದ್ಧ!

ಚಪಾತಿ, ಪುಲ್ಕಾ, ರೋಟಿ, ಕುಲ್ಚಾ ಜೊತೆಗೆ ಒಳ್ಳೆಯ ಕಾಂಬಿನೇಶನ್!

ಧನ್ಯವಾದಗಳು