ಕೇಸರಿ ಬಾತ್ ಎಲ್ಲರ ಮೆಚ್ಚಿನ ಸಿಹಿ ತಿಂಡಿ! ಅದರಲ್ಲೂ ಪೈನಾಪಲ್ ಹಾಕಿ ಮಾಡಿದ ಕೇಸರಿ ಬಾತ್ ಮತ್ತಷ್ಟು ರುಚಿಕರ!

ಮಾಡುವ ವಿಧಾನ :-

1 ಲೋಟ ಚಿರೋಟಿ ರವೆಯನ್ನು 2 ಚಮಚ ತುಪ್ಪ ಹಾಕಿ ಹುರಿದಿಡಿ.

1 ಚಿಕ್ಕ ಪೈನಾಪಲ್ ಸಣ್ಣಗೆ ಹೆಚ್ಚಿಡಿ

ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ.

4 ಏಲಕ್ಕಿ ಪುಡಿ ಮಾಡಿಡಿ.

  

ಬಾಣಲೆಯಲ್ಲಿ 1/4 ಲೋಟ ತುಪ್ಪ ಹಾಕಿ. ಗೋಡಂಬಿ, ಬಾದಾಮಿ, ದ್ರಾಕ್ಷಿ ಹುರಿದು ತೆಗೆದಿಡಿ.

ಅದೇ ಬಾಣಲೆಯಲ್ಲಿ ಹೆಚ್ಚಿದ ಪೈನಾಪಲ್ ಹಾಕಿ ಸ್ವಲ್ಪ ಹುರಿದು 2 ಲೋಟ ನೀರು, 1 ಲೋಟ ಸಕ್ಕರೆ, ಚಿಟಿಕೆ ಕೇಸರಿ ಬಣ್ಣ ಹಾಕಿ ಕುದಿಯಲು ಇಡಿ.

ನೀರು ಕುದಿಯುವಾಗ ಹುರಿದ ರವೆಯನ್ನು ಹಾಕಿ ಚೆನ್ನಾಗಿ ಕಲೆಸಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

ಕೊನೆಯಲ್ಲಿ ಏಲಕ್ಕಿ ಪುಡಿ, ಹುರಿದ ಡ್ರೈ ಫ್ರೂಟ್ಸ್ ಹಾಕಿದರೆ ರುಚಿಯಾದ ಪೈನಾಪಲ್ ಕೇಸರಿ ಬಾತ್ ಸಿದ್ಧ!

ಧನ್ಯವಾದಗಳು