ಸೀಮೆ ಬದನೆ ಕಾಯಿಯ ಒಂದು ರುಚಿಯಾದ ರೆಸಿಪಿ ಇಲ್ಲಿದೆ!

ಸೀಮೆ ಬದನೆ ಕೂಟು ಮಾಡುವ ವಿಧಾನ:-

4 ಚಮಚ ಕಡಲೇ ಬೇಳೆಯನ್ನು 2 ಗಂಟೆ ನೆನೆಸಿಡಿ.

1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1 ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಹುರಿದು ಪುಡಿ ಮಾಡಿಡಿ.

4 ಚಮಚ ಕಾಯಿ ತುರಿದಿಡಿ.

ಕಡಲೇ ಬೇಳೆ, ಉದ್ದಿನ ಬೇಳೆ, ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, ಕಾಯಿ ತುರಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.

  

3 ಸೀಮೆ ಬದನೆ ಕಾಯಿ, 1 ಈರುಳ್ಳಿ, 1 ಟೋಮೇಟೋ ಸಣ್ಣಗೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಚಿಟಿಕೆ ಅರಿಷಿಣ ಹಾಕಿ ಬಾಡಿಸಿ, ಹೆಚ್ಚಿದ ಈರುಳ್ಳಿ, ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ.

ನಂತರ ಸೀಮೆ ಬದನೆ ಕಾಯಿ, ನೆನೆಸಿದ ಕಡಲೇ ಬೇಳೆ ಹಾಕಿ ಸ್ವಲ್ಪ ಹುರಿದು, ರುಬ್ಬಿದ ಮಿಶ್ರಣ, ಉಪ್ಪು, ಸ್ವಲ್ಪ ನೀರು ಹಾಕಿ ಮುಚ್ಚಳ ಹಾಕಿ 1 ವಿಷಲ್ ಕೂಗಿಸಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಸೀಮೆ ಬದನೆ ಕಾಯಿ ಕೂಟು ಸಿದ್ಧ!

ಇದೇ ರೀತಿ ನಿಮಗೆ ಇಷ್ಟವಾಗುವ ಬೇರೆ ತರಕಾರಿ ಹಾಕಿ ಮಾಡಬಹುದು!

ಈ ಕೂಟು ಚಪಾತಿ, ರೊಟ್ಟಿ, ಅನ್ನದೊಡನೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು