ಹಣ್ಣುಗಳಲ್ಲಿ ಸಾಧಾರಣವಾಗಿ ಫ್ರೂಟ್ಸ್ ಸಲಾಡ್, ರಸಾಯನ ಮಾಡುತ್ತಾರೆ. ರುಚಿಯಾದ ಮಾಡುವ ವಿಧಾನ ಇಲ್ಲಿದೆ!

ಹಣ್ಣುಗಳ ಕೋಸಂಬರಿ ಮಾಡುವ ವಿಧಾನ:-

ನಿಮಗೆ ಬೇಕಾಗುವಷ್ಟು , ಇಷ್ಟವಾಗುವ ಹಣ್ಣುಗಳನ್ನು ಸಣ್ಣಗೆ ಹೆಚ್ಚಿಡಿ.

   

4 ಚಮಚ ಕಾಯಿ ತುರಿದಿಡಿ.

4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

    

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಚಿಕ್ಕ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಸಾಸಿವೆ, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿಡಿ.

ಹೆಚ್ಚಿದ ಹಣ್ಣುಗಳಿಗೆ ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು, ನಿಂಬೆ ರಸ, ಒಗ್ಗರಣೆ ಹಾಕಿ ಕಲೆಸಿದರೆ ರುಚಿಯಾದ, ವಿಭಿನ್ನವಾದ ರುಚಿಯ ಹಣ್ಣಿನ ಕೋಸಂಬರಿ ಸಿದ್ಧ!

ಧನ್ಯವಾದಗಳು