ಡ್ರೈ ಫ್ರೂಟ್ಸ್ ಉಪಯೋಗಿಸಿ ನಾನು ಮಾಡಿರುವ ಸುಲಭವಾದ, ರುಚಿಯಾದ, ಆರೋಗ್ಯಕರವಾದ ಸಿಹಿಯ ರೆಸಿಪಿ ಇಲ್ಲಿದೆ!

ಡ್ರೈ ಫ್ರೂಟ್ಸ್ ಬರ್ಫಿ ಮಾಡುವ ವಿಧಾನ:-

1 ಅಳತೆ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ ನಟ್ ಅನ್ನು ( ಎಲ್ಲಾ ಸೇರಿ ಒಂದು ಅಳತೆ ) ನುಣ್ಣಗೆ ಪುಡಿ ಮಾಡಿಡಿ. ಹುರಿಯುವ ಅಗತ್ಯವಿಲ್ಲ! ಫ್ರಿಡ್ಜ್ ನಿಂದ ನೇರವಾಗಿ ತೆಗೆದು ಪುಡಿ ಮಾಡಿ.

  

ಬಾಣಲೆಯಲ್ಲಿ 1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಕರಗಿ ಒಂದೆಳೆ ಪಾಕ ಬಂದೊಡನೆ, ಡ್ರೈ ಫ್ರೂಟ್ಸ್ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಮೀಡಿಯಂ ಉರಿಯಲ್ಲಿ 4 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸುತ್ತಾ ಇರಿ.

ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ ಬಂದಾಗ ಒಲೆಯಿಂದ ತೆಗೆದು ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ಡ್ರೈ ಫ್ರೂಟ್ಸ್ ಮಕ್ಕಳ ಬೆಳವಣಿಗೆಗೆ ಬಹಳ ಒಳ್ಳೆಯದು! ಆದರೆ ಕೆಲವು ಮಕ್ಕಳು ಡ್ರೈ ಫ್ರೂಟ್ಸ್ ತಿನ್ನುವುದಿಲ್ಲ! ಹೀಗೆ ಮಾಡಿ ಕೊಡಿ! ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ!

ಧನ್ಯವಾದಗಳು