ಗುಜರಾತ್ ಮೂಲದ ಮುಂಬಯಿಯ Steet Food ನಲ್ಲಿ ಹೆಚ್ಚು ಜನಪ್ರಿಯವಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ :-

2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿಡಿ.

1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

2 ಚಮಚ ದಾಳಿಂಬೆ ಬೀಜ ಬಿಡಿಸಿಡಿ.

2 ಚಮಚ ಕಾಯಿ ತುರಿದಿಡಿ.

    

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ 1 ಚಮಚ ಪಾವ್ ಭಾಜಿ ಮಸಾಲ, 1 ಚಮಚ ರೆಡ್ ಚಿಲ್ಲಿ ಗಾರ್ಲಿಕ್ ಚಟ್ನಿ, 1 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ. ( ದಬೇಲಿ ಪುಡಿ ರೆಡಿ ಮೇಡ್ ಸಿಗುತ್ತದೆ. ಆದರೆ ನಾನು ಪಾವ್ ಭಾಜಿ ಮಸಾಲೆ ಹಾಕಿ ಮಾಡಿರುವುದು)

ನಂತರ 1/2 ನಿಂಬೆ ರಸ,ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿಡಿ.

ಒಂದು ತಟ್ಟೆಯಲ್ಲಿ ಆಲೂಗೆಡ್ಡೆ ಮಿಶ್ರಣ ಹರಡಿ ಅದರ ಮೇಲೆ ದಾಳಿಂಬೆ ಬೀಜ, ಕಾಯಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ ಇಡಿ.

 

ಹಸಿರು ಚಟ್ನಿ ಮಡಲು:-

1 ಹಿಡಿ ಕೊತ್ತಂಬರಿ ಸೊಪ್ಪು, 1 ಹಿಡಿ ಪುದೀನ ಸೊಪ್ಪು, 2 ಹಸಿ ಮೆಣಸಿನಕಾಯಿ, ಸ್ವಲ್ಪ ನಿಂಬೆ ರಸ, ಉಪ್ಪು ಹಾಕಿ ರುಬ್ಬಿದರೇ ಹಸಿರು ಚಟ್ನಿ ಸಿದ್ಧ!

ಸಿಹಿ ಚಟ್ನಿ ಮಾಡಲು:-

  

6 ಕರ್ಜೂರ ಬೀಜ ತೆಗೆದು, 1 ಚಿಕ್ಕ ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ತೊಳೆದು 1/2 ಗಂಟೆ ನೆನೆಸಿ. ನುಣ್ಣಗೆ ರುಬ್ಬಿ ಸೋಸಿ. ಬಾಣಲೆಯಲ್ಲಿ ಕರ್ಜೂರ, ಹುಣಿಸೆ ರಸ, 1 ಚಮಚ ಬೆಲ್ಲದ ಪುಡಿ, 1/2 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ ಹಾಕಿ ಕುದಿಸಿದರೆ ಸಿಹಿ ಚಟ್ನಿ ಸಿದ್ಧ!

 

ರೆಡ್ ಚಿಲ್ಲಿ ಗಾರ್ಲಿಕ್ ಚಟ್ನಿ:-

ಅಂಗಡಿಗಳಲ್ಲಿ ರೆಡಿ ಮೇಡ್ ಸಿಗುತ್ತದೆ. ಇಲ್ಲದಿದ್ದರೆ ಮನೆಯಲ್ಲಿ ಮಾಡುವ ವಿಧಾನ:-

6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಬಿಸಿ ನೀರಿನಲ್ಲಿ 1/2 ಗಂಟೆ ನೆನೆಸಿಡಿ. ನಂತರ 1 ಸಿಪ್ಪೆ ತೆಗೆದ ಬೆಳ್ಳುಳ್ಳಿ, ಸ್ವಲ್ಪ ನಿಂಬೆ ರಸ, ಉಪ್ಪು, 1/2 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ ಹಾಕಿ ನುಣ್ಣಗೆ ರುಬ್ಬಿದರೆ ರೆಡ್ ಚಿಲ್ಲಿ ಗಾರ್ಲಿಕ್ ಚಟ್ನಿ ರೆಡಿ!

 

ದಬೇಲಿ ಮಾಡಲು:-

ಪಾವ್ ಅನ್ನು ಮಧ್ಯ ಭಾಗದಲ್ಲಿ ಮುಕ್ಕಾಲು ಭಾಗದಷ್ಟು ಕತ್ತರಿಸಿ ಒಂದು ಭಾಗಕ್ಕೆ ಹಸಿರು ಚಟ್ನಿ ಸವರಿ. ಇನ್ನೊಂದು ಭಾಗಕ್ಕೆ ಸಿಹಿ ಚಟ್ನಿ ಸವರಿ.

  

ಮಧ್ಯದಲ್ಲಿ ಆಲೂಗೆಡ್ಡೆ ಮಿಶ್ರಣ ತುಂಬಿ, ಮೇಲೆ ಸ್ವಲ್ಪ ಹುರಿದ ಕಡಲೇ ಬೀಜ, ಸೇವ್ ಉದುರಿಸಿ ಸ್ವಲ್ಪ ಅದುಮಿಡಿ.

ಕಾವಲಿಯ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಎರಡೂ ಕಡೆ ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ದಬೇಲಿ ಸವಿಯಲು ಸಿದ್ಧ!

  

ಪ್ಮಾವ್ ಸಿಗದಿದ್ದರೆ ಬನ್ ಬಳಸಬಹುದು.

ಧನ್ಯವಾದಗಳು