ರುಚಿಯಾದ, ಸುಲಭವಾಗಿ ಮಾಡಬಹುದಾದ ಹೊಸ ರುಚಿಯ ಪಾಲಾಕ್ ಇಡ್ಲಿ ಫ್ರೈ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ಬಟನ್ ಇಡ್ಲಿಯ ತಟ್ಟೆಯಲ್ಲಿ ಪುಟ್ಟ ಪುಟ್ಟ ಇಡ್ಲಿಗಳನ್ನು ಮಾಡಿಡಿ. ಬಟನ್ ಇಡ್ಲಿಯ ತಟ್ಟೆ ಇಲ್ಲದಿದ್ದರೆ ಸಾಧಾರಣವಾಗಿ ಮಾಡುವ ಇಡ್ಲಿಯನ್ನೇ ಮಾಡಿ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಮಾಡಬಹುದು.

    

2 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ ಹಿಟ್ಟು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಗಂಟಿಲ್ಲದ ಹಾಗೆ ಕಲೆಸಿ, ಬೆಂದ ಇಡ್ಲಿಗಳನ್ನು ಒಂದೊಂದಾಗಿ ಅದ್ದಿ ಗರಿ ಗರಿಯಾಗಿ ಬಿಸಿ ಎಣ್ಣೆಯಲ್ಲಿ ಕರಿದಿಡಿ.

 

ಒಗ್ಗರಣೆಗೆ:-

2 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ, ತೊಳೆದು ಬಾಣಲೆಯಲ್ಲಿ ಸ್ವಲ್ಪಹೆಚ್ಚು ನೀರು ಹಾಕಿ 3 ನಿಮಿಷ ಬೇಯಿಸಿ, ನೀರು ಸಂಪೂರ್ಣವಾಗಿ ತೆಗೆದು ರುಬ್ಬಿಡಿ.

1 ಈರುಳ್ಳಿ , 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 6 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

  

ಸ್ವಲ್ಪ ಈರುಳ್ಳಿ ಹೂ ಸಣ್ಣಗೆ ಹೆಚ್ಚಿಡಿ. ( Spring Onion )

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಸ್ವಲ್ಪ ಹುರಿದು, ನಂತರ ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ಬಾಡಿಸಿ.

ರುಬ್ಬಿದ ಪಾಲಾಕ್ ಮಿಶ್ರಣ ಹಾಕಿ ಸ್ವಲ್ಪ ಬಾಡಿಸಿ, ಕರಿದ ಇಡ್ಲಿಗಳನ್ನು ಹಾಕಿ ಚೆನ್ನಾಗಿ ಕಲೆಸಿ, ಕೊನೆಯಲ್ಲಿ ಹೆಚ್ಚಿದ ಈರುಳ್ಳಿ ಹೂ ಹಾಕಿ ಕಲೆಸಿದರೆ ರುಚಿಯಾದ, ವಿಭಿನ್ನವಾದ ರುಚಿಯ ಪಾಲಾಕ್ ಇಡ್ಲಿ ಫ್ರೈ ಸಿದ್ಧ!

ಧನ್ಯವಾದಗಳು