PEANUT CHAT ಪೀನಟ್ ಚಾಟ್
ಸಂಜೆ ಮಕ್ಕಳು ಶಾಲೆಯಿಂದ ಬಂದ ಮೇಲೆ, ಪತಿ ಆಫೀಸ್ ನಿಂದ ಬಂದ ಮೇಲೆ ಸ್ವಲ್ಪ ಖಾರಾ, ರುಚಿಯಾಗಿ ತಿನ್ನಬೇಕು ಅನ್ನಿಸಿದಾಗ ಸುಲಭವಾಗಿ ಮಾಡಬಹುದಾದ ರೆಸಿಪಿ!
ಪೀನಟ್ ಚಾಟ್ ಮಾಡುವ ವಿಧಾನ:-
1/4 ಕೇಜಿ ಕಡಲೇ ಬೀಜ 4 ಗಂಟೆ ನೆನೆಸಿ, ಚಿಟಿಕೆ ಉಪ್ಪು ಸೇರಿಸಿ ಮೂರ್ನಾಲ್ಕು ವಿಷಲ್ ಕೂಗಿಸಿಡಿ. ಕಡಲೇ ಬೀಜ ನೆನೆದಷ್ಟೂ ಚೆನ್ನಾಗಿ ಬೇಯುತ್ತದೆ! ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಬೇಕಾದರೂ ಮಾಡಬಹುದು!
1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಬೆಂದ ಕಡಲೇ ಬೀಜದ ನೀರು ಸೋರಿ ಹಾಕಿ, ಹೆಚ್ಚಿದ ತರಕಾರಿಗಳು, 1/2 ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಚಾಟ್ ಮಸಾಲ, ಸ್ವಲ್ಪ ನಿಂಬೆ ರಸ ( ಟೋಮೇಟೋ ಹುಳಿ ಸಾಕಾದರೆ ನಿಂಬೆ ರಸ ಬೇಕಿಲ್ಲ) ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಪೀನಟ್ ಚಾಟ್ ಸಿದ್ಧ!
ನಿಮಗೆ ಬೇಯಿಸಿದ ಕಡಲೇ ಬೀಜ ಬೇಡವಾದರೆ ಎಣ್ಣೆಯಲ್ಲಿ ಕರಿದ ಕಡಲೇ ಬೀಜಕ್ಕೆ ಇದೇ ತರಹ ಮಸಾಲ ಹಾಕಿ ಮಾಡಬಹುದು! ಅದೂ ಕೂಡ ರುಚಿಯಾಗಿರುತ್ತದೆ!
ಇಷ್ಟವಾಗುವವರು ಕ್ಯಾರೆಟ್ ತುರಿ ಸ್ವಲ್ಪ ಸೇರಿಸಿ ಕೊಳ್ಳಬಹುದು!
ಮೊದಲೇ ಕಲೆಸಿಟ್ಟರೆ ನೀರು ಬಿಟ್ಟುಕೊಳ್ಳುತ್ತದೆ. ಎಲ್ಲಾ ಸಿದ್ಧ ಮಾಡಿಟ್ಟುಕೊಂಡು ತಿನ್ನುವ ಮೊದಲು ಕಲೆಸಿ.
ಧನ್ಯವಾದಗಳು