ಎಲ್ಲರಿಗೂ ಗೊತ್ತಿರುವ ಹಾಗೆ ಜೋಳ ಆರೋಗ್ಯಕ್ಕೆ ಒಳ್ಳೆಯದು! ಜೋಳದ ಹಿಟ್ಟಿನ ರುಚಿಯಾದ ದೋಸೆ ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1 ಅಳತೆ ಜೋಳದ ಹಿಟ್ಟು, 1/2 ಅಳತೆ ಚಿರೋಟಿ ರವೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, 1 ಚಮಚ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ, ಉಪ್ಪು, ಸಣ್ಣಗೆ ಹೆಚ್ಚಿದ 1 ಈರುಳ್ಳಿ ( Optional ) ಹಾಕಿ ಸುಮಾರು 3 3/4 ರಿಂದ 4 ಅಳತೆ ನೀರು ಹಾಕಿ ಚೆನ್ನಾಗಿ ಕಲೆಸಿ.

  

ಬಿಸಿಯಾದ ಕಾವಲಿ ಮೇಲೆ ಮೊದಲು ಒಂದು ಚಮಚ ಎಣ್ಣೆ ಹಾಕಿ ಬಟ್ಟೆ ಅಥವಾ ಕಿಚನ್ ಟವೆಲ್ ನಿಂದ ಕಾವಲಿಯನ್ನು ಒರೆಸಿ.

  

ನಂತರ ಹಿಟ್ಟನ್ನು ಮತ್ತೊಮ್ಮೆ ತಳ ಭಾಗದಿಂದ ಚೆನ್ನಾಗಿ ಕಲೆಸಿ ದೋಸೆಯಂತೆ ಗುಂಡಗೆ ಸುರಿಯಿರಿ! ರವೆ ದೋಸೆಯ ಹದಕ್ಕೆ ನೀರಾಗಿ ಹಿಟ್ಟು ಕಲೆಸಿರಬೇಕು. ಹಿಟ್ಟು ತೆಳ್ಳಗೆ ಕಲೆಸಿದರೆ ಎಷ್ಟು ಬೇಕಾದರೂ ತೆಳ್ಳನೆಯ ದೋಸೆ ಮಾಡಬಹುದು.

ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ, ಸುಲಭವಾಗಿ ಮಾಡಬಹುದಾದ ಜೋಳದ ದೋಸೆ ಸಿದ್ಧ! ಮುಂದಿನ ದೋಸೆ ಹಾಕುವಾಗ ಹಿಟ್ಟನ್ನು ಕೆಳಗಡೆಯಿಂದ ಮತ್ತೊಂದು ಬಾರಿ ಚೆನ್ನಾಗಿ ಕಲೆಸಿ ಹಾಕಿ.

ಇದು ಹಳೆಯ ಜೋಳದ ಹಿಟ್ಟಿನಿಂದ ಅಂದರೆ ಅಂಟು ( ಜಿಗಿ ) ಕಡಿಮೆ ಆಗಿರುವ ಜೋಳದ ಹಿಟ್ಟಿನಿಂದ ಮಾಡಿರುವುದು!

ಧನ್ಯವಾದಗಳು