ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ನಮ್ಮ ಮುದ್ದು ಮಕ್ಕಳು ಕ್ಯಾರೆಟ್ ಕೊಟ್ಟರೆ ತಿನ್ನುವುದಿಲ್ಲ. ಹೀಗೆ ಮಾಡಿ ಕೊಡಿ! ಇಷ್ಟ ಪಟ್ಟು ತಿನ್ನುತ್ತಾರೆ!

ಮಾಡುವ ವಿಧಾನ:-

2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು, ನೀರು ಹಾಕದೆ ನುಣ್ಣಗೆ ರುಬ್ಬಿಡಿ. ತೀರಾ ಬೇಕೆನಿಸಿದರೆ 1 ಅಥವಾ 2 ಚಮಚ ನೀರು ಹಾಕಿ.

    

1/2 ಹಿಡಿ ಗೋಡಂಬಿ, 1/2 ಹಿಡಿ ಬಾದಾಮಿ ಹಸಿಯಾಗೆ ಪುಡಿ ಮಾಡಿಡಿ. Dry fruits optional! ಬೇಕಾದರೆ ಹಾಕಿಕೊಳ್ಳಬಹುದು. ನಿಮ್ಮ ರುಚಿಗೆ ತಕ್ಕ ಹಾಗೆ ಹೆಚ್ಚು ಕಡಿಮೆ ಹಾಕಬಹುದು. ಬೇಕಾದರೆ ಪಿಸ್ತಾ, ವಾಲ್ ನಟ್ ಕೂಡ ಹಾಕಬಹುದು.

1/2 ಕಪ್ ಸಕ್ಕರೆ, 4 ಏಲಕ್ಕಿ ಒಟ್ಟಿಗೆ ಪುಡಿ ಮಾಡಿಡಿ. ಸಕ್ಕರೆ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು!

ದೊಡ್ಡ ಪಾತ್ರೆಯಲ್ಲಿ ರುಬ್ಬಿದ ಕ್ಯಾರೆಟ್ ಮಿಶ್ರಣ, dry fruits ಪುಡಿ, ಸಕ್ಕರೆ ಪುಡಿ, 1/2 ಕಪ್ ಮೈದಾ, 1/2 ಕಪ್ ಚಿರೋಟಿ ರವೆ ಹಾಕಿ ಚೆನ್ನಾಗಿ ಕಲೆಸಿ. 1 ಚಮಚ ಬಿಸಿ ಎಣ್ಣೆ ಹಾಕಿ ನೀರು ಹಾಕದೆಗಟ್ಟಿಯಾಗಿ ಹಿಟ್ಟು ಕಲೆಸಿಡಿ.

  

ಕಲೆಸಿದ ಹಿಟ್ಟನ್ನು ಚಪಾತಿ ಉಂಡೆಯಷ್ಟು ತೆಗೆದು ಕೊಂಡು, ಆದಷ್ಟೂ ತೆಳ್ಳಗೆ ಲಟ್ಟಿಸಿ.

  

ಫೋರ್ಕ್ ಅಥವಾ ಚಾಕುವಿನಿಂದ ಅಲ್ಲಲ್ಲಿ ತೂತು ಮಾಡಿ. ಆಗ ಶಂಕರ ಪೋಳಿ ಉಬ್ಬುವುದಿಲ್ಲ. ನಂತರ Diamond ಆಕಾರದಲ್ಲಿ ಕತ್ತರಿಸಿ, ಬಿಸಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಗೆ ಗರಿ ಗರಿಯಾಗುವವರೆಗೆ ಕರಿದು ಹೆಚ್ಚಿನ ಎಣ್ಣೆ ತೆಗೆದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ.

ಧನ್ಯವಾದಗಳು