ERULLI MAJJIGE HULI ಈರುಳ್ಳಿ ಮಜ್ಜಿಗೆ ಹುಳಿ
ಸಾಮಾನ್ಯವಾಗಿ ಎಲ್ಲರೂ ಬೂದುಗುಂಬಳದ ಮಜ್ಜಿಗೆ ಹುಳಿ ಮಾಡುತ್ತಾರೆ. ಈರುಳ್ಳಿ ಮಜ್ಜಿಗೆ ಹುಳಿ ಕೂಡ ತುಂಬಾ ಚೆನ್ನಾಗಿರುತ್ತದೆ! ಆಂಧ್ರ ಸ್ಟೈಲ್ ಹೋಟೆಲ್ ಗಳಲ್ಲಿ ಮಾಡುವ ವಿಧಾನ ಇಲ್ಲಿದೆ! ರುಚಿಯಾಗಿ, ವಿಭಿನ್ನವಾಗಿರುತ್ತದೆ!
ಮಾಡುವ ವಿಧಾನ:-
2 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.
1 ಚಮಚ ಹುರಿಗಡಲೆ, 2 ಚಮಚ ಕಾಯಿ ತುರಿ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಚಟ್ನಿಯ ಹದಕ್ಕೆ ರುಬ್ಬಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹೆಚ್ಚಿದ ಈರುಳ್ಳಿ, ಕರಿಬೇವು, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ.
ಗಟ್ಟಿಯಾದ ಹುಳಿ ಮೊಸರನ್ನು ಸ್ವಲ್ಪ ಕಡೆದು, ಈರುಳ್ಳಿ ಒಗ್ಗರಣೆಗೆ ಸೇರಿಸಿ.
ಉಪ್ಪು, ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ಬಿಸಿಯಾಗಿ ಉಕ್ಕಲು ಪ್ರಾರಂಭವಾದಾಗ ಒಲೆಯಿಂದ ಇಳಿಸಿದರೆ, ರುಚಿಯಾದ, ವಿಭಿನ್ನವಾದ ಈರುಳ್ಳಿ ಮಜ್ಜಿಗೆ ಹುಳಿ ಸಿದ್ಧ!
ನಿಮಗೆ ಈರುಳ್ಳಿ ಇಷ್ಟವಿಲ್ಲದಿದ್ದರೆ, ಇದೇ ರೀತಿ ಎಳೆಯ ಬೆಂಡೆ ಕಾಯಿಯನ್ನು ತೊಳೆದು, ಒರೆಸಿ 1 ಇಂಚು ಉದ್ದಕ್ಕೆ ಹೆಚ್ಚಿ, ಒಗ್ಗರಣೆಯಲ್ಲಿ ಬೇಯಿಸಿ ಮಾಡಬಹುದು!
ಧನ್ಯವಾದಗಳು