SRIKHAND ಶ್ರೀ ಖಂಡ್
ಶ್ರೀ ಖಂಡ್ ಗುಜರಾತಿನ ಮೂಲದ ಸಿಹಿ! ಗಟ್ಟಿಯಾದ ಮೊಸರಿನಿಂದ ಮಾಡುವ ಸಿಹಿ!
ಮಾಡುವ ವಿಧಾನ:-
1/2 ಲೀಟರ್ ಗಟ್ಟಿಯಾದ, ಸಿಹಿಯಾದ ಮೊಸರನ್ನು ಒಂದು ಜಾಲರಿಯ ಮೇಲೆ ಸೋರಿ ಹಾಕಿಡಿ. ಕೆಳಗಡೆ ಒಂದು ತಟ್ಟೆಯನ್ನಿಟ್ಟು ಮುಚ್ಚಿ, ಎರಡು ಗಂಟೆ ಕಾಲ FRIDGE ನಲ್ಲಿ ತಟ್ಟೆ ಮುಚ್ಚಿಡಿ.
ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ.
1 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ಹಾಕಿ 1 ಗಂಟೆ ನೆನೆಸಿಡಿ.
100 ಗ್ರಾಂ ಸಕ್ಕರೆ, 4 ಸಿಪ್ಪೆ ತೆಗೆದ ಏಲಕ್ಕಿ ನುಣ್ಣಗೆ ಪುಡಿ ಮಾಡಿಡಿ.
FRIDGE ನಿಂದ ಹೊರ ತೆಗೆದು ಗಟ್ಟಿಯಾದ ಮೊಸರಿಗೆ ಸಕ್ಕರೆ ಪುಡಿ, ಕೇಸರಿ ನೆನೆಸಿದ ಹಾಲು, ಗೋಡಂಬಿ, ಬಾದಾಮಿ ಚೂರುಗಳನ್ನು ಹಾಕಿ ಚೆನ್ನಾಗಿ ಕಲೆಸಿ. (ಕೆಳಗಿನ ತಟ್ಟೆಯಲ್ಲಿರುವುದನ್ನು ಮಜ್ಜಿಗೆ ಮಾಡಬಹುದು!)
ಪುಟ್ಟ ಪುಟ್ಟ ಮಣ್ಣಿನ ಕುಡಕೆಗಳಲ್ಲಿ ತುಂಬಿಸಿ, ಮತ್ತೆ 1 ಗಂಟೆ FRIDGE ನಲ್ಲಿಟ್ಟು ನಂತರ ಸವಿಯಿರಿ!
ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು!
ಮಾವಿನ ಹಣ್ಣಿನ ಸೀಸನ್ ನಲ್ಲಿ ಹಣ್ಣಿನ ಗಟ್ಟಿಯಾದ ರಸ ತೆಗೆದು ಗಟ್ಟಿಯಾದ ಮೊಸರಿಗೆ ಸೇರಿಸಿ FRIDGE ನಲ್ಲಿಟ್ಟು ತಿಂದರೆ ಮ್ಯಾಂಗೋ ಶ್ರೀಖಂಡ್ ಸಿದ್ಧ!
ಧನ್ಯವಾದಗಳು