ಎಲ್ಲರಿಗೂ ಬಹಳ ಇಷ್ಟವಾಗುವ ತಿಂಡಿ!

ಮಾಡುವ ವಿಧಾನ:-

ಬೇಬಿ ಕಾರ್ನ್ ಅನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ.

  

ಬಟ್ಟಲಿನಲ್ಲಿ 4 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ, ಉಪ್ಪು, 1 ಚಮಚ ಖಾರದ ಪುಡಿ ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ, ಬೇಬಿ ಕಾರ್ನ್ ಗಳನ್ನು ಅದ್ದಿ ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.

  

1 ಈರುಳ್ಳಿ, 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ, 1 ಚಮಚ ಟೋಮೇಟೋ ಸಾಸ್, 1 ಚಮಚ ಚಿಲ್ಲಿ ಸಾಸ್, 1 ಚಮಚ ವಿನೆಗರ್, 1/2 ಚಮಚ ಸೋಯಾ ಸಾಸ್ ಹಾಕಿ ಚೆನ್ನಾಗಿ ಕಲೆಸಿ.

 

ನಂತರ ಕರಿದ ಬೇಬಿ ಕಾರ್ನ್, 1 ಚಮಚ ಕಾರ್ನ್ ಫ್ಲೋರ್ ಅನ್ನು 2 ಚಮಚ ನೀರಿಗೆ ಹಾಕಿ ಕಲೆಸಿ ಹಾಕಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಬೇಬಿ ಕಾರ್ನ್ ಮಂಚೂರಿಯನ್ ಸವಿಯಲು ಸಿದ್ಧ!

ಧನ್ಯವಾದಗಳು