ಹೀರೇ ಕಾಯಿ ದೇಹಕ್ಕೆ ತಂಪು ನೀಡುತ್ತದೆ! ಅದರಿಂದ ಮಾಡುವ ರುಚಿಯಾದ ತೊವ್ವೆಯ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

2 ಹೀರೇ ಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

50 ಗ್ರಾಂ ಹೆಸರು ಬೇಳೆ ತೊಳೆದು, ಹೆಚ್ಚಿದ ಹೀರೇ ಕಾಯಿ ಹಾಕಿ 1 ವಿಷಲ್ ಕೂಗಿಸಿಡಿ.

  

4 ಚಮಚ ಕಾಯಿ ತುರಿದಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

4 ಬಾಳಕದ ಮೆಣಸಿನಕಾಯಿ ಕರಿದಿಡಿ. ಅಥವಾ ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

ಬೆಂದ ಹೀರೇ ಕಾಯಿಗೆ, ಕಾಯಿ ತುರಿ, ಮುರಿದ ಬಾಳಕದ ಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ.

  

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಸೇರಿಸಿದರೆ ರುಚಿಯಾದ, ಆರೋಗ್ಯಕರವಾದ ಹೀರೇ ಕಾಯಿ ತೊವ್ವೆ ಸಿದ್ಧ!

ಹೀರೇ ಕಾಯಿ ಬದಲು ಸೀಮೇ ಬದನೆ, ಕ್ಯಾಬೇಜ್ ಬೇಕಾದರೆ ಹಾಕಬಹುದು!

ಹಸಿ ಮೆಣಸಿನಕಾಯಿ ಹಾಕುವುದಾದರೆ ಒಗ್ಗರಣೆಯಲ್ಲಿ ಬಾಡಿಸಿ ಹಾಕಿ.

ಈ ತೊವ್ವೆ ಚಪಾತಿ, ಬಿಸಿ ಅನ್ನದೊಂದಿಗೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು