ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು! ????????????

ಸಂಕ್ರಾಂತಿಯ ಹಬ್ಬದ ಪ್ರಯುಕ್ತ ನಮ್ಮ ಮನೆಯಲ್ಲಿ ಮಾಡಿದ ಮಹಾ ಭೋಜನ!

ಕೋಸಂಬರಿ
ಬೀನ್ಸ್ ಪಲ್ಯ
ಬಟಾಣಿ, ಆಲೂಗೆಡ್ಡೆ ಬಾತ್
ಸಿಹಿ ಪೊಂಗಲ್
ಖಾರಾ ಪೊಂಗಲ್
ಬಜ್ಜಿ
ಅನ್ನ
ರಸಂ
ಪರ್ಪು
ಚಾಕೊಲೇಟ್ ಹೋಳಿಗೆ
ಬಾದಾಮಿ ಹಲ್ವಾ

 

ಬಾದಾಮಿ ಹಲ್ವಾ ಮಾಡುವ ವಿಧಾನ:-

1 ಬಟ್ಟಲು ಬಾದಾಮಿಯನ್ನು 2ಗಂಟೆ ನೆನೆಸಿ, ಸಿಪ್ಪೆ ತೆಗೆದು 1/2 ಬಟ್ಟಲು ಹಾಲಿನ ಜೊತೆಗೆ ನುಣ್ಣಗೆ ರುಬ್ಬಿ. ಬಿಸಿ ನೀರಿನಲ್ಲಿ ನೆನೆಸಿದರೆ ಬೇಗ ಸಿಪ್ಪೆ ತೆಗೆಯಬಹುದು!

  

1 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ಹಾಕಿ ಗಂಟೆ ನೆನೆಸಿಡಿ.

  

ರುಬ್ಬಿದ ಮಿಶ್ರಣವನ್ನು 1 ಬಟ್ಟಲು ಸಕ್ಕರೆ ಹಾಕಿ, ದಪ್ಪ ತಳದ ಬಾಣಲೆಯಲ್ಲಿ ಹಾಕಿ Medium flame ನಲ್ಲಿ ಗಟ್ಟಿಯಾಗಿ ಆಗುವವರೆಗೆ ಕಲೆಸುತ್ತಾ ಇರಿ. ಕೇಸರಿ ಹಾಕಿದ ಹಾಲು, ಜೊತೆಗೆ 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಮಿಶ್ರಣ ಗಟ್ಟಿಯಾಗಿ, ಒಂದೇ ಉಂಡೆಯಂತೆ ಆದಾಗ ಒಲೆಯಿಂದ ಇಳಿಸಿ ತಣ್ಣಗಾದ ನಂತರ ಸವಿಯಿರಿ!

 

ಚಾಕೊಲೇಟ್ ಹೋಳಿಗೆ ಮಾಡುವ ವಿಧಾನ:-

ಚಿರೋಟಿ ರವೆಗೆ, ಚಿಟಿಕೆ ಉಪ್ಪು, 2 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಹಾಕಿ ಕಣಕದ ಹಿಟ್ಟು ಕಲೆಸಿ 1 ಗಂಟೆ ನೆನೆಸಿಡಿ.

100 ಗ್ರಾಂ ಸಿಹಿ ಖೋವಾಗೆ, 6 ಚಮಚ ಚಾಕೊಲೇಟ್ ಸಾಸ್ ಹಾಕಿ ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಮಿಶ್ರಣ ಗಟ್ಟಿಯಾಗಿ ಆಗುವವರೆಗೆ ಕಲೆಸುತ್ತಾ ಇರಿ.

ಚಿರೋಟಿ ರವೆ ಮಿಶ್ರಣವನ್ನು ಮತ್ತೊಂದು ಬಾರಿ ಚೆನ್ನಾಗಿ ಕಲೆಸಿ, ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ತಟ್ಟಿ ಮಧ್ಯದಲ್ಲಿ ಖೋವಾಉಂಡೆ ಇಟ್ಟು ಹೋಳಿಗೆ ತಟ್ಟಿ, ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿದರೆ ಮಕ್ಕಳಿಗೆ ಇಷ್ಟವಾಗುವ ಚಾಕೊಲೇಟ್ ಹೋಳಿಗೆ ಸಿದ್ಧ!

ಧನ್ಯವಾದಗಳು