ಎಲ್ಲರಿಗೂ ಇಷ್ಟವಾಗುವ ಆಹಾರ! ಬೆಳಗ್ಗೆಯ ತಿಂಡಿಗೆ ಸೂಕ್ತವಾದ ರೆಸಿಪಿ! ಮಂಗಳೂರು ಬನ್ಸ್ ಎಲ್ಲರಿಗೂ ಗೊತ್ತಿರುವ ಹಾಗೆ ಮೈದಾ ಹಿಟ್ಟಿನಲ್ಲಿ ಮಾಡುವುದು! ನಾನು ಗೋಧಿ ಹಿಟ್ಟು ಹಾಕಿ ಮಾಡಿರುವುದು! ರುಚಿ ತುಂಬಾ ಚೆನ್ನಾಗಿರುತ್ತದೆ! ಆರೋಗ್ಯಕರ ಕೂಡಾ

ಮಾಡುವ ವಿಧಾನ:-

2 ಚೆನ್ನಾಗಿ ಹಣ್ಣಾಗಿರುವ ಪಚ್ಚ ಬಾಳೆ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿಡಿ.

  

ದೊಡ್ಡ ಬಟ್ಟಲಿನಲ್ಲಿ ಬಾಳೆಹಣ್ಣಿನ ರಸ, 1 ಬಟ್ಟಲು ಗೋಧಿ ಹಿಟ್ಟು, 1 ಟೇಬಲ್ ಚಮಚ ಸಕ್ಕರೆ, ( ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ, ಬಾಳೆ ಹಣ್ಣಿನ ಸಿಹಿ ಕೂಡ ಸಾಕಷ್ಟು ಇರುತ್ತದೆ!), 1/4 ಟೀ ಚಮಚ ಉಪ್ಪು, 1 ಟೀ ಚಮಚ ಜೀರಿಗೆ ( Optional ), 1/4 ಚಮಚ ಬೇಕಿಂಗ್ ಪೌಡರ್, 1 ಚಮಚ ಎಣ್ಣೆ, 2 ಟೇಬಲ್ ಚಮಚ ಗಟ್ಟಿ ಮೊಸರು ಹಾಕಿ ಚೆನ್ನಾಗಿ ಕಲೆಸಿ. ಬೇಕಾದರೆ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ, ಸ್ವಲ್ಪ ಎಣ್ಣೆ ಸವರಿ 4 ರಿಂದ 6 ಗಂಟೆ ಮುಚ್ಚಿಡಿ.

  

ನಂತರ ಹಿಟ್ಟನ್ನು ಮತ್ತೊಮ್ಮೆ ನಾದಿ ಪೂರಿ ಹಿಟ್ಟಿನ ಉಂಡೆಗಿಂತ ಸ್ವಲ್ಪ ದೊಡ್ಡ ಉಂಡೆ ತೆಗೆದುಕೊಂಡು, ಪೂರಿಗಿಂತ ಸ್ವಲ್ಪ ದಪ್ಪಗೆ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು, ಚಟ್ನಿಯೊಂದಿಗೆ ಸವಿಯಿರಿ!

ಧನ್ಯವಾದಗಳು