ಈ ಛಳಿಗಾಲಕ್ಕೆ ಸರಿಯಾದ ರೆಸಿಪಿ! ಆರೋಗ್ಯಕರವಾದ, ರುಚಿಕರವಾದ ಆಹಾರ!

ಮಾಡುವ ವಿಧಾನ:-

1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಡಿ.

1 ಚಮಚ ಮೆಣಸು, 1 ಚಮಚ ಜೀ ಹುರಿದು ಪುಡಿ ಮಾಡಿಡಿ.

1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

1 ಲೋಟ ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ.

  

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, ಸಾಸಿವೆ, ಮೆಣಸು ಜೀರಿಗೆ ಪುಡಿ, ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು, ನಂತರ ಮಾಡಿಟ್ಟ ಅನ್ನ, ಉಪ್ಪು ಹಾಕಿ ಸ್ವಲ್ಪ ಬಿಸಿ ಮಾಡಿ, ಕೊನೆಯಲ್ಲಿ ನಿಂಬೆ ರಸ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಆರೋಗ್ಯಕರವಾದ ಪೆಪ್ಪರ್& ಗಾರ್ಲಿಕ್ ರೈಸ್ ಸಿದ್ಧ!

ಇದು ನನ್ನ ತಾಯಿ ನಮಗೆ ಬಾಣಂತಿಯರಾಗಿದ್ದಾಗ ಮಾಡಿ ಕೊಡುತ್ತಿದ್ದ ರೆಸಿಪಿ. ಆದರೆ ನಿಂಬೆ ರಸ ಸೇರಿಸುತ್ತಿರವಿಲ್ಲ!

ಬೆಳ್ಳುಳ್ಳಿ ಬೇಡವಾದರೆ ಒಗ್ಗರಣೆಗೆ ಇಂಗು ಹಾಕಿ ಮಾಡಬಹುದು!

ಧನ್ಯವಾದಗಳು