ಸಾಮಾನ್ಯವಾಗಿ ಪಲಾವ್ ಮಾಡುವಾಗ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಮಾಡುತ್ತಾರೆ! ಬೆಳ್ಳುಳ್ಳಿ, ಈರುಳ್ಳಿ ಹಾಕದೆ ರುಚಿಯಾದ ಪಲಾವ್ ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1 ಪಾವು ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆಪೆಸಿ, ನಂತರ ನೀರು ಸೋರಿ ಹಾಕಿಡಿ.

  

1 ಕಟ್ಟು ಪುದೀನಾ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.

ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಸಣ್ಣಗೆ ಹೆಚ್ಚಿಡಿ.

  

1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1/2 ಟೀ ಚಮಚ ಕರಿ ಮೆಣಸು, 4 ರಿಂದ 6 ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು, ಪುಡಿ ಮಾಡಿಡಿ.

  

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, 2 ಪಲಾವ್ ಎಲೆ, 4 ಮರಾಠಿ ಮೊಗ್ಗು, ಸ್ವಲ್ಪ ಕಲ್ಲು ಹೂ ಹಾಕಿ ಹುರಿದು, ಹೆಚ್ಚಿದ ತರಕಾರಿಗಳು, ಪುದೀನಾ, ಮಸಾಲೆ ಪುಡಿ, ಬಾಸುಮತಿ ಅಕ್ಕಿ, ಉಪ್ಪು ಹಾಕಿ ಸ್ವಲ್ಪ ಹುರಿದು, 2 ಪಾವು ನೀರು ಹಾಕಿ ಚೆನ್ನಾಗಿ ಕಲೆಸಿ, ತಟ್ಟೆ ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ.

ಆಗಾಗ ಫೋರ್ಕ್ ನಲ್ಲಿ ನಿಧಾನವಾಗಿ ಕಲೆಸುವುದನ್ನು ಮರೆಯಬೇಡಿ!

ಅಕ್ಕಿ ನೆನೆಸುವುದರಿಂದ ಬೇಗ ಬೇಯುತ್ತದೆ. ಅಕ್ಕಿ ಪೂರ್ತಿಯಾಗಿ ಬೆಂದ ಮೇಲೆ ಒಲೆಯಿಂದ ಇಳಿಸಿ, ಮೊಸರು ಬಜ್ಜಿಯೊಂದಿಗೆ ಬಡಿಸಿ!

ಧನ್ಯವಾದಗಳು