ಅವರೆ ಕಾಳಿನ ಇನ್ನೊಂದು ರುಚಿಯಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1 ಲೋಟ ಹಿದುಕಿದ ಬೇಳೆಯನ್ನು ತೊಳೆದು ನೀರು ಸೋರಿ ಹಾಕಿಡಿ.

1 ಲೋಟ ಅಕ್ಕಿ 30 ನಿಮಿಷ ನೆನೆಸಿ ಸೋರಿ ಹಾಕಿಡಿ.

  

1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಹಿಡಿ ಹಿದುಕಿದ ಬೇಳೆ, 1 ಚಮಚ ಜೀರಿಗೆ, 2 ಚಮಚ ಎಣ್ಣೆ ಹಾಕಿ ಹುರಿದಿಡಿ.

1 ಟೇಬಲ್ ಚಮಚ ಗಸಗಸೆ, 2 ಟೀ ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ ಮಾಡಿಡಿ.

8 ರಿಂದ 10 ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.

4 ಚಮಚ ಕಾಯಿ ತುರಿದಿಡಿ.

  

ಹುರಿದ ಈರುಳ್ಳಿ, ಧನಿಯಾ ಗಸಗಸೆ ಪುಡಿ, ಬ್ಯಾಡಗಿ ಮೆಣಸಿನಕಾಯಿ ಪುಡಿ, ಕಾಯಿ ತುರಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, 1 ಚಮಚ ಹೆಚ್ಚಿದ ಈರುಳ್ಳಿ, ಕರಿಬೇವು, ಚೆಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿದು ನಂತರ ಹಿದುಕಿದ ಬೇಳೆ, ಅಕ್ಕಿ, ಉಪ್ಪು, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

ನಂತರ 3 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿದರೆ, ರುಚಿಯಾದ ಹಿದುಕಿದ ಬೇಳೆ ಕಿಚಡಿ ತಯಾರು!

ಇದೇ ರೆಸಿಪಿಯಲ್ಲಿ ಅಕ್ಕಿ ಹಾಕದೆ ಇದೇ ರೀತಿ ಮಾಡಿದರೆ ಹಿದುಕಿದ ಬೇಳೆ ಸಾಂಬಾರ್ ಸಿದ್ಧ!

ಧನ್ಯವಾದಗಳು