ಹಿದುಕಿದ ಬೇಳೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ! ಅದರಿಂದ ಎಷ್ಟೋ ರುಚಿಯಾದ ಆಹಾರಗಳನ್ನು ಮಾಡಬಹುದು! ಎಂದಾದರೂ ಹಿದುಕಿದ ಬೇಳೆಯ ಗ್ರೇವಿ ಮಾಡಿದ್ದೀರಾ!? ಇಲ್ಲವಾದರೆ ಹೀಗೆ ಮಾಡಿ ನೋಡಿ!

ಮಾಡುವ ವಿಧಾನ:-

1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿ, 8 ಗೋಡಂಬಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿದು ರುಬ್ಬಿಡಿ.

1 ಪಾವು ( 1/4 ಕೇಜಿ ) ಹಿದುಕಿದ ಬೇಳೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿಡಿ.

  

ಬಾಣಲೆಯಲ್ಲಿ 2 ಚಮಚ ಎಣ್ಣೆ/ ಬೆಣ್ಣೆ ಹಾಕಿ, ಜೀರಿಗೆ, ಚಿಟಿಕೆ ಅರಿಷಿಣ,1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಸ್ವಲ್ಪ ಹುರಿದು, ರುಬ್ಬಿದ ಮಿಶ್ರಣ, 1 ಚಮಚ ಖಾರದ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು, ಸ್ವಲ್ಪ ನೀರು ಬೇಕಾದರೆ ಹಾಕಿ ಕುದಿಸಿ.

ಬೇಯಿಸಿದ ಹಿದುಕಿದ ಬೇಳೆ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ಕುದಿಸಿ ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪುಹಾಕಿದರೆ ರುಚಿಯಾದ ಹಿದುಕಿದ ಬೇಳೆ ಕರ್ರಿ ಸಿದ್ಧ!

ಹಿದುಕಿದ ಬೇಳೆ ಸಿಗದಿದ್ದರೆ ಅವರೆ ಕಾಳು ಬೇಕಾದರೆ ಹಾಕಿ ಮಾಡಬಹುದು!

ದಕ್ಷಿಣ ಕರ್ನಾಟಕದ ಹಿದುಕಿದ ಬೇಳೆಗೆ, ಉತ್ತರ ಭಾರತದ ಗ್ರೇವಿಯ ಶೈಲಿಯ ರುಚಿ ಕೊಡುವ ಸಣ್ಣ ಪ್ರಯತ್ನ ಮಾಡಿದ್ದೇನೆ!

ಧನ್ಯವಾದಗಳು