ಎಲ್ಲರಿಗೂ ಇಷ್ಟವಾಗುವ ತಿಂಡಿ ಹಪ್ಪಳ! ಗರಿ ಗರಿಯಾಗಿ, ರುಚಿ ರುಚಿಯಾಗಿರುವ ಯಾರಿಗೆ ಇಷ್ಟವಿಲ್ಲ ಹೇಳಿ!

ಹಪ್ಪಳದ ಕೋನ್ ಮಾಡಿ ಕೊಡಿ ನಿಮ್ಮ ಮಕ್ಕಳು ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ!

ಮಾಡುವ ವಿಧಾನ:-

ಮೆಣಸು ಹಾಕಿರುವ ಯಾವುದಾದರೂ ಹಪ್ಪಳ ಮಧ್ಯದಲ್ಲಿ ಕತ್ತರಿಸಿ ಎರಡು ಭಾಗ ಮಾಡಿ.

 

ಕಾವಲಿ ಬಿಸಿಯಾಗಲು ಇಡಿ. ಕಾದ ಕಾವಲಿಯ ಮೇಲೆ ಹಪ್ಪಳ ಹಾಕಿ ಪೇಪರ್ ನಿಂದ ಒತ್ತಡ ಕೊಟ್ಟು ಹಪ್ಪಳ ಎಲ್ಲಾ ಕಡೆಯೂ ಬೇಯಿಸಿ ಒಂದು Tissue Paper ಮೇಲೆ ಹಾಕಿ ಕೋನ್ ಆಕಾರದಲ್ಲಿ ಮಡಚಿ ಸ್ವಲ್ಪ ಹೊತ್ತು ಹಾಗೆ ಇಟ್ಟುಕೊಂಡಿರಿ. ನಂತರ ತೆಗದರೆ ಅದು ಕೋನ್ ಆಕಾರದಲ್ಲಿಯೇ ಇರುತ್ತದೆ!

  

ಹೀಗೆ ಎಲ್ಲಾ ಹಪ್ಪಳಗಳನ್ನು ಸುಟ್ಟ ನಂತರ ನಿಮಗೆ ಬೇಕಾದ ಯಾವುದೇ Filling ಅನ್ನು ಅದರಲ್ಲಿ ತುಂಬಿಸಿ ಸವಿಯಿರಿ!

ತರಕಾರಿಗಳ ಸಲಾಡ್, ಕಡಲೇ ಪುರಿ, ಪಾಪ್ ಕಾರ್ನ್, ಉಸಲಿ ಹೀಗೆ ನಿಮ್ಮ ರುಚಿಗೆ ತಕ್ಕ ಹಾಗೆ ಮಾಡಿಕೊಳ್ಳಬಹುದು!

ಧನ್ಯವಾದಗಳು