ಸಂಜೆ ವೇಳೆಗೆ ಕಾಫಿ ಟೀ ಜೊತೆಗೆಚೆನ್ನಾಗಿರುತ್ತದೆ! ಯಾವಾಗಲೂ ಕಡಲೇ ಪುರಿಯಲ್ಲಿ ಮಾಡುವ ಭೇಲ್ ಅನ್ನು ಬದಲಾವಣೆಗಾಗಿ ಪೇಪರ್ ಅವಲಕ್ಕಿಯಲ್ಲಿ ಮಾಡಿನೋಡಿ! ತುಂಬಾ ಚೆನ್ನಾಗಿರುತ್ತದೆ!

ಮಾಡುವ ವಿಧಾನ:-

1 ಲೋಟ ಪೇಪರ್ ಅವಲಕ್ಕಿಯನ್ನು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ.

ಅಥವಾ Oven ನಲ್ಲಿ ಸ್ವಲ್ಪ ಎಣ್ಣೆ ಸವರಿ 1 ನಿಮಿಷ ಬಿಸಿ ಮಾಡಿ ತೆಗೆದಿಡಿ. ನಾನು Oven ನಲ್ಲಿಯೇ ಮಾಡಿರುವುದು!

2 ಚಮಚ ಪುದೀನಾ, 2 ಚಮಚ ಕೊತ್ತಂಬರಿ ಸೊಪ್ಪು, 1 ಹಸಿ ಮೆಣಸಿನಕಾಯಿ, ನಿಂಬೆ ರಸ ಹಾಕಿ ರುಬ್ಬಿ ಹಸಿರು ಚಟ್ನಿ ಮಾಡಿಡಿ.

2 ಚಮಚ ಹುಣಿಸೆ ರಸ, ಚೂರು ಬೆಲ್ಲ ಹಾಕಿ ಕುದಿಸಿ ಸಿಹಿ ಚಟ್ನಿ ಮಾಡಿಡಿ. ಅಥವಾ ಕರ್ಜೂರದ ಪೇಸ್ಟ್ ಬೇಕಾದರೆ ಹಾಕಬಹುದು.

1 ಈರುಳ್ಳಿ, 1 ಟೋಮೇಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

1/2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದಿಡಿ.

ಬಟ್ಟಲಿನಲ್ಲಿ ಹೆಚ್ಚಿದ ತರಕಾರಿಗಳು, ಸ್ವಲ್ಪ ಉಪ್ಪು, 1/2 ಚಮಚ ಖಾರದ ಪುಡಿ, ಕ್ಯಾರೆಟ್ ತುರಿ, 1 ಚಮಚ ಹಸಿರು ಚಟ್ನಿ, 1 ಚಮಚ ಸಿಹಿ ಚಟ್ನಿ, ಚಿಟಿಕೆ ಚಾಟ್ ಮಸಾಲ, ಅವಲಕ್ಕಿಯನ್ನು ಹಾಕಿ ಬೇಗ ಬೇಗ ಕಲೆಸಿ. ಮೇಲೆ ಸೇವ್ ಉದುರಿಸಿ ತಕ್ಷಣ ಸವಿಯಿರಿ!

ಮೊದಲೇ ಮಾಡಿಟ್ಟರೆ ಅವಲಕ್ಕಿ ಮೆತ್ತಗೆ ಆಗುತ್ತದೆ! ಕಲೆಸಿದ ತಕ್ಷಣ ತಿನ್ನಬೇಕು!

ಹಸಿರು ಚಟ್ನಿ, ಸಿಹಿ ಚಟ್ನಿ, ಖಾರದ ಪುಡಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು!

ಧನ್ಯವಾದಗಳು