SWEET CORN MASALA ಸ್ವೀಟ್ ಕಾರ್ನ್ ಮಸಾಲ

Categories: Kannada, Tindi TinisuPublished On: January 1, 20180 Comments0.3 min read
Indu Jayaram
SHARE

ಮಕ್ಕಳಿಗೆ ಬಹಳ ಇಷ್ಟವಾಗುವ ಗ್ರೇವಿ!

ಮಾಡುವ ವಿಧಾನ:-

100 ಗ್ರಾಂ ಸ್ವೀಟ್ ಕಾರ್ನ್ ಬೇಯಿಸಿಟ್ಟು ಕೊಳ್ಳಿ.

1 ಈರುಳ್ಳಿ, 2 ಟೋಮೋಟೋ, 4 ರಿಂದ 6 ಹಸಿ ಮೆಣಸಿನಕಾಯಿ, 10 ಗೋಡಂಬಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ. ಹಸಿ ಮೆಣಸಿನಕಾಯಿ ಬದಲಾಗಿ ಕೆಂಪು ಮೆಣಸಿನಕಾಯಿ ಬೇಕಾದರೆ ಹಾಕಬಹುದು.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಚಿಟಿಕೆ ಅರಿಷಿಣ,1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, 1/2 ಚಮಚ ಧನಿಯ ಪುಡಿ, 1/2 ಗರಂ ಮಸಾಲ ಪುಡಿ, ರುಬ್ಬಿದ ಮಿಶ್ರಣ, ಉಪ್ಪು ಹಾಕಿ ಹುರಿದು, ನಂತರ ಬೆಂದ ಸ್ವೀಟ್ ಕಾರ್ನ್, ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಸ್ವೀಟ್ ಕಾರ್ನ್ ಮಸಾಲ ಸವಿಯಲು ಸಿದ್ಧ!

ಧನ್ಯವಾದಗಳು

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment