ರುಚಿಯಾದ ಹಾಲಿನ ಪುಡಿ ಜಾಮೂನ್ ಮನೆಯಲ್ಲಿ ಮಾಡುವ ಇಲ್ಲಿದೆ!

ಮಾಡುವ ವಿಧಾನ:-

  

2 ಅಳತೆ ಸಕ್ಕರೆಯನ್ನು 2 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಪೂರ್ತಿಯಾಗಿ ಕರಗಿದ ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ ಒಲೆಯಿಂದ ಇಳಿಸಿ ಚಿಟಿಕೆ ಏಲಕ್ಕಿ ಪುಡಿ ಹಾಕಿಡಿ.

  

1 ಅಳತೆ ಹಾಲಿನ ಪುಡಿ, 1 ಚಮಚ ಮೈದಾ , 1 ಚಮಚ ತುಪ್ಪ, 1/4 ಚಮಚ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ಸ್ವಲ್ಪವೇ ಹಾಲು/ ನೀರು ಸೇರಿಸಿ ಮೃದುವಾಗಿ ಹಿಟ್ಟು ಕಲೆಸಿ ತಟ್ಟೆ ಮುಚ್ಚಿ 5 ನಿಮಿಷ ಬಿಡಿ.

  

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ, ಕೈಗೆ ತುಪ್ಪ ಸವರಿ ಪುಟ್ಟ ಪುಟ್ಟ ಉಂಡೆಗಳನ್ನು ಮಾಡಿ, ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಗೆ ಆಗುವವರೆಗೆ ಬೇಯಿಸಿ ಸಕ್ಕರೆ ಪಾಕದಲ್ಲಿ 1/2 ಗಂಟೆ ನೆನೆಸಿದರೆ ರುಚಿಯಾದ, ಮೃದುವಾದ ಹಾಲಿನ ಪುಡಿಯ ಜಾಮೂನ್ ಸಿದ್ಧ!

ಧನ್ಯವಾದಗಳು