ಹಾಲು ಬಾಯಿ ಎಲ್ಲರೂ ಬೆಲ್ಲ ಹಾಕಿ ಮಾಡುತ್ತಾರೆ! ಎಂದಾದರೂ ಖಾರಾ ಹಾಲು ಬಾಯಿ ಮಾಡಿದ್ದೀರಾ!? ಇಲ್ಲವಾದರೆ ಒಮ್ಮೆ ಮಾಡಿ ನೋಡಿ! ನಿಮಗೆಲ್ಲಾ ಖಂಡಿತಾ ಇಷ್ಟ ಆಗುತ್ತೆ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ!

1 ಅಳತೆ ಅಕ್ಕಿ ತೊಳೆದು 2 ಗಂಟೆ ನೆನೆಸಿಡಿ. ಜೊತೆಗೆ 4 ಬ್ಯಾಡಗಿ ಮೆಣಸಿನಕಾಯಿ ನೆನೆಸಿಡಿ.

1 ಅಳತೆ ಕಾಯಿ ತುರಿದಿಡಿ.

2 ಚಮಚ ಹುಣಿಸೆ ರಸ ತೆಗೆದಿಡಿ.

    

ನೆಂದ ಅಕ್ಕಿ, ಮೆಣಸಿನಕಾಯಿ, ಕಾಯಿ ತುರಿ, ಹುಣಿಸೆ ರಸ ಹಾಕಿ ನುಣ್ಣಗೆ ರುಬ್ಬಿಡಿ. ದೋಸೆ ಹಿಟ್ಟಿಗಿಂತ ತೆಳ್ಳಗೆ ಇರಬೇಕು. ರುಬ್ಬಿದ ನಂತರ ನೀರು ಸೇರಿಸಿ. ಮೊದಲೇ ನೀರು ಹೆಚ್ಚು ಹಾಕಿದರೆ ರುಬ್ಬಲು ಕಷ್ಟ ಆಗುತ್ತದೆ.

ಬಾಣಲೆಯಲ್ಲಿ 2 ಚಮಚ ತುಪ್ಪ/ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಚಿಟಿಕೆ ಇಂಗು, ಹೆಚ್ಚಿದ ಕರಿಬೇವು ಹಾಕಿ ಸ್ವಲ್ಪ ಹುರಿದು, ರುಬ್ಬಿದ ಮಿಶ್ರಣ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.

  

ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಉರಿ ಕಡಿಮೆ ಮಾಡಿ ಪೂರ್ತಿಯಾಗಿ ಬೇಯಲು ಬಿಡಿ.

ಒದ್ದೆ ಕೈಯಿಂದ ಮುಟ್ಟಿದರೆ ಹಿಟ್ಟು ಕೈಗೆ ಅಂಟದಿದ್ದರೆ ಖಾರಾ ಹಾಲು ಬಾಯಿ ಬೆಂದಿದೆ ಎಂದು ಅರ್ಥ!

  

ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ಚೆನ್ನಾಗಿ ಕಲೆಸಿ ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಚಟ್ನಿಯೊಂದಿಗೆ ಸವಿಯಿರಿ!

ಇಷ್ಟವಾಗುವವರು ಸಣ್ಣಗೆ ಹೆಚ್ಚಿದ ಈರುಳ್ಳಿ ಬೇಕಾದರೆ ಒಗ್ಗರಣೆಗೆ ಹಾಕಿಕೊಳ್ಳಬಹುದು!

ಧನ್ಯವಾದಗಳು