ಪ್ರತಿ ದಿನ ಬೇಳೆ ಸಾರು, ಸಾಂಬಾರ್ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ತುಂಬಾ ಜನರಿಗೆ ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಅಂತ ಈ ರೆಸಿಪಿ ಹಾಕಿದ್ದೇನೆ!
4 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
1 ಚಮಚ ಹುಣಿಸೆ ರಸ ತೆಗೆದಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಅರಿಷಿಣ, ಚಿಟಿಕೆ ಇಂಗು ಹಾಕಿ ಬಾಡಿಸಿ, ಹೆಚ್ಚಿದ ಈರುಳ್ಳಿ, ಉಪ್ಪುಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು.
ನಂತರ ಹುಣಿಸೆ ರಸ, 2 ಚಮಚ ಸಾಂಬಾರ್ ಪುಡಿ, 1/2 ಚಮಚ ಖಾರದ ಪುಡಿ, ಚೂರು ಬೆಲ್ಲ , ಸ್ವಲ್ಪ ನೀರು ಹಾಕಿ ಕುದಿಸಿ,ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಈರುಳ್ಳಿ ಗೊಜ್ಜು ಸಿದ್ಧ!
ಚಪಾತಿ, ದೋಸೆ ಜೊತೆಗೆ ತುಂಬಾ ಚೆನ್ನಾಗಿರುತ್ತದೆ. ಇದೇ ಗೊಜ್ಜಿಗೆ ಅನ್ನ ಹಾಕಿ ಕಲೆಸಿದರೆ ರುಚಿಯಾದ ಈರುಳ್ಳಿ ಗೊಜ್ಜನ್ನ ರೆಡಿ!
ಧನ್ಯವಾದಗಳು
Leave A Comment