ಸಂಜೆ ವೇಳೆಗೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಕ್ಯಾಪ್ಸಿಕಮ್ ಬಜ್ಜಿ ಇದ್ದರೆ ಎಷ್ಟು ಚೆನ್ನ ಅಲ್ಲವೇ!?

ಚಿಕ್ಕ ಚಿಕ್ಕ ಕ್ಯಾಪ್ಸಿಕಮ್ ಗಳನ್ನು ಆಯ್ದುಕೊಳ್ಳಿ! ಸುತ್ತಲೂ ತಿರುಗಿಸಿ ಎಚ್ಚರಿಕೆಯಿಂದ ಗಮನಿಸಿ. ತೂತು ಆಗಿದ್ದರೆ ಹಾಕಬೇಡಿ.

1 ಲೋಟ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, ಸ್ವಲ್ಪ ಓಂ ಕಾಳು, ಜೀರಿಗೆ, ಚಿಟಿಕೆ ಇಂಗು, ಉಪ್ಪು, 1 ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟು ಕಲೆಸಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಕಾದ ಎಣ್ಣೆಯಲ್ಲಿ ಕ್ಯಾಪ್ಸಿಕಮ್ ಬಜ್ಜಿ ಹಿಟ್ಟಿನಲ್ಲಿ ಅದ್ದಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಆಗುವವರೆಗೆ ಕರಿಯಬೇಕು.ಸ್ವಲ್ಪ ಸಮಯ ಬೇಕು ಬಜ್ಜಿ ಬೇಯಲು. ಕ್ಯಾಪ್ಸಿಕಮ್ ಪೂರ್ತಿಯಾಗಿ ಹಾಕುವುದರಿಂದ ಸ್ವಲ್ಪ ಬೇಯುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.

ನಂತರ ಎಣ್ಣೆಯಿಂದ ತೆಗೆದು ಸ್ವಲ್ಪ ಬೆಚ್ಚಗೆ ಆದ ಮೇಲೆ ಮಧ್ಯದಲ್ಲಿ ಅಡ್ಡವಾಗೆ ಕತ್ತರಿಸಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ, ಚಾಟ್ ಮಸಾಲ, ಖಾರದ ಪುಡಿ ಉದುರಿಸಿ ಸವಿಯಿರಿ!

ಧನ್ಯವಾದಗಳು